ಖಲೀಸ್ಥಾನಿ ಬೆಂಬಲಿಗರಿಂದ ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಧ್ವಂಸ 

ಜ.26 ರಂದು ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲೀಸ್ಥಾನಿ ಬೆಂಬಲಿಗರು ದಾಳಿ ನಡೆಸಿದ್ದು ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

Published: 28th January 2021 06:44 PM  |   Last Updated: 28th January 2021 06:44 PM   |  A+A-


Pro-Khalistani supporters vandalise Indian embassy in Rome

ಖಲೀಸ್ಥಾನಿ ಬೆಂಬಲಿಗರಿಂದ ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಧ್ವಂಸ

Posted By : Srinivas Rao BV
Source : PTI

ನವದೆಹಲಿ: ಜ.26 ರಂದು ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲೀಸ್ಥಾನಿ ಬೆಂಬಲಿಗರು ದಾಳಿ ನಡೆಸಿದ್ದು ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

ಭಾರತ ಸರ್ಕಾರ ಇಟಾಲಿಯಲ್ಲಿರುವ ಅಧಿಕಾರಿಗಳಿಗೆ ನಿರಂತರವಾಗಿ ಖಲೀಸ್ಥಾನಿಗಳ ಬಗ್ಗೆ ಎಚ್ಚರಿಕೆ ನೀಡುತ್ತ ಬಂದಿತ್ತು. ಗಣರಾಜ್ಯೋತ್ಸವ ದಿನದಂದೂ ಸಹ ಭಾರತ ಎಚ್ಚರಿಕೆ ನೀಡಿತ್ತು.

ಭಾರತ ಸರ್ಕಾರದ ರಾಯಭಾರಿಗಳು ಹಾಗೂ ರಾಯಭಾರಿ ಕಚೇರಿಯ ಪ್ರದೇಶದ ಸುರಕ್ಷತೆ ಅಲ್ಲಿನ ಸರ್ಕಾರಕ್ಕೆ ಸೇರಿದ್ದಾಗಿದೆ. ಈ ದಾಳಿಯ ಕುರಿತು ಮಾಹಿತಿಯನ್ನು ಇಟಾಲಿ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ ಎಂದು ಭಾರತ ಸರ್ಕಾರ ಹೇಳಿದ್ದು ತಪ್ಪಿತಸ್ಥರ ವಿರುದ್ಧ ಇಟಾಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಮಂಗಳವಾರದಂದು ವಾಷಿಂಗ್ ಟನ್ ಡಿ.ಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ಥಾನಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ಗುಂಪು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದರು.


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp