ಇಸ್ಲಾಮಾಬಾದ್ ನ ಭಾರತೀಯ ಹೈ ಕಮಿಷನ್ ಕಚೇರಿ ಬಳಿ ಪಾಕ್ ಡ್ರೋನ್ ಹಾರಾಟ: ಭಾರತ ತೀವ್ರ ಪ್ರತಿಭಟನೆ!

ಪಾಕಿಸ್ತಾನ ಭಾರತದ ವಿರುದ್ಧ ಹೊಸ ಆಯುಧವನ್ನು ಪ್ರಯೋಗಿಸುತ್ತಿದೆ. ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಈಗ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದೆ. 
ಇಸ್ಲಾಮಾಬಾದ್ ನ ಭಾರತೀಯ ಹೈ ಕಮಿಷನ್ ಕಚೇರಿ
ಇಸ್ಲಾಮಾಬಾದ್ ನ ಭಾರತೀಯ ಹೈ ಕಮಿಷನ್ ಕಚೇರಿ

ಇಸ್ಲಾಮಾಬಾದ್: ಪಾಕಿಸ್ತಾನ ಭಾರತದ ವಿರುದ್ಧ ಹೊಸ ಆಯುಧವನ್ನು ಪ್ರಯೋಗಿಸುತ್ತಿದೆ. ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಈಗ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಹಾರಾತ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ. 

ಈ ಬೆಳವಣಿಗೆ ಸಂಬಂಧ ತಕ್ಷಣವೇ ಎಚ್ಚೆತ್ತಿರುವ ಭಾರತ ಸರ್ಕಾರ ಈ ಭದ್ರತಾ ಲೋಪಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು,  ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮೌಖಿಕವಾಗಿ ಚರ್ಚಿಸಿದೆ.  

ಈ ನಡುವೆ ಜು.2 ರಂದು ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಚಟುವಟಿಕೆ ವರದಿಯಾಗಿತ್ತು. ಬೆಳಿಗ್ಗೆ 4:25 ರ ವೇಳೆಗೆ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು. 

ಬಿಎಸ್ ಎಫ್ ದಾಳಿಯ ಪರಿಣಾಮವಾಗಿ ಡ್ರೋನ್ ಹಿಮ್ಮೆಟ್ಟಿತ್ತು. ಜೂ.27 ರಂದು ಜಮ್ಮುವಿನ ವಾಯುನೆಲೆ ಮೇಲೆ ನಡೆದಿದ್ದ ಡ್ರೋನ್ ದಾಳಿಯಲ್ಲಿ ಲಷ್ಕರ್-ತೊಯ್ಬಾ-ಉಗ್ರ ಸಂಘಟನೆಯ ಕೈವಾಡವಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ಆಯಕಟ್ಟಿನ ಪ್ರದೇಶಗಳ ಬಳಿ ಡ್ರೋನ್ ಗಳನ್ನು ನಿಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com