ಭಾರತದೊಂದಿಗಿನ ರಾಫೆಲ್ ಒಪ್ಪಂದ: ಫ್ರಾನ್ಸ್ ನಿಂದ ನ್ಯಾಯಾಂಗ ತನಿಖೆ ಪ್ರಾರಂಭ!

ಭಾರತದೊಂದಿಗಿನ 59,000 ಕೋಟಿ ರೂಪಾಯಿ ಮೌಲ್ಯದ ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ಪಕ್ಷಪಾತದ ಆರೋಪದ ತನಿಖೆ ನಡೆಸಲು ಫ್ರಾನ್ಸ್ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಿದೆ. 
ರಾಫೆಲ್ ಜೆಟ್ (ಸಂಗ್ರಹ ಚಿತ್ರ)
ರಾಫೆಲ್ ಜೆಟ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತದೊಂದಿಗಿನ 59,000 ಕೋಟಿ ರೂಪಾಯಿ ಮೌಲ್ಯದ ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ಪಕ್ಷಪಾತದ ಆರೋಪದ ತನಿಖೆ ನಡೆಸಲು ಫ್ರಾನ್ಸ್ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಿದೆ. 

ಪ್ರೆಂಚ್ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಫ್ರೆಂಚ್ ಇನ್ವೆಸ್ಟಿಗೇಟೀವ್ ವೆಬ್ ಸೈಟ್ ಮೀಡಿಯಾಪಾರ್ಟ್ ವರದಿ ಮಾಡಿದೆ. 

ಈ ಬೆಳವಣಿಗೆ ಭಾರತ ಸರ್ಕಾರದ ವಿರುದ್ಧ ಮುಗುಬೀಳಲು ವಿಪಕ್ಷಗಳಿಗೆ ಅಸ್ತ್ರ ದೊರೆತಂತಾಗಿದ್ದು, ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಜಂಟಿ ಸಂಸತ್ ಸಮಿತಿ (ಜೆಪಿಸಿ) ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ನ ಮುಖ್ಯ ವಕ್ತಾರ ರಣ್ದೀಪ್ ಸುರ್ಜೇವಾಲ ಹೇಳಿದ್ದಾರೆ. 

"ರಾಫೆಲ್ ಡೀಲ್ ನಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಈಗ ಸ್ಪಷ್ಟತೆ ದೊರೆತಿದೆ. ಫ್ರಾನ್ಸ್ ನ ಸರ್ಕಾರ ತನಿಖೆಗೆ ಆದೇಶಿಸಿದ ಬಳಿಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನ ನಿಲುವನ್ನು ಸಮರ್ಥಿಸುತ್ತದೆ" ಎಂದು ಸುರ್ಜೇವಾಲ ಹೇಳಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿಯಾಗಲೀ ಭಾರತ ಸರ್ಕಾರವಾಗಲೀ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com