ಇಸ್ರೇಲ್​​-ಪ್ಯಾಲೆಸ್ತೀನ್​ ನಡುವೆ ನಿಲ್ಲದ ಸಂಘರ್ಷ; ಗುಂಡಿನ ದಾಳಿಯಲ್ಲಿ ಓರ್ವ ಸಾವು

ಪ್ಯಾಲೆಸ್ತೀನ್ ಹಾಗೂ ಇಸ್ರೇಲ್​ ನಡುವಿನ ಸಂಘರ್ಷ ಮತ್ತೆ ಮುಂದುವರೆದಿದ್ದು, ಶನಿವಾರ ಇಸ್ರೇಲ್​ ನಡೆಸಿದ ಗುಂಡಿನ ದಾಳಿಯಲ್ಲಿ ಪ್ಯಾಲೆಸ್ತೀನ್ ಮೂಲದ ವ್ಯಕ್ತಿ ಸಾವನ್ನಪ್ಪಿ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಇಸ್ರೇಲ್ ಪಡೆಯೊಂದಿಗಿನ ಘರ್ಷಣೆಯ ಚಿತ್ರ
ಇಸ್ರೇಲ್ ಪಡೆಯೊಂದಿಗಿನ ಘರ್ಷಣೆಯ ಚಿತ್ರ

ರಾಮಲ್ಲಾಹ್: ಪ್ಯಾಲೆಸ್ತೀನ್ ಹಾಗೂ ಇಸ್ರೇಲ್​ ನಡುವಿನ ಸಂಘರ್ಷ ಮತ್ತೆ ಮುಂದುವರೆದಿದ್ದು, ಶನಿವಾರ ಇಸ್ರೇಲ್​ ನಡೆಸಿದ ಗುಂಡಿನ ದಾಳಿಯಲ್ಲಿ ಪ್ಯಾಲೆಸ್ತೀನ್ ಮೂಲದ ವ್ಯಕ್ತಿ ಸಾವನ್ನಪ್ಪಿ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ಯಾಲೆಸ್ಟೇನ್ ಆರೋಗ್ಯ ಸಚಿವಾಲಯವು, ನಬ್ಲಸ್ ನಗರದ ಕುಸ್ರಾ ಗ್ರಾಮದ 20 ವರ್ಷದ ಮೊಹಮ್ಮದ್ ಫರೀದ್ ಹಸನ್​ ಎಂಬಾತನನ್ನು ಇಸ್ರೇಲ್ ಸೇನೆ ಹತ್ಯೆಗೈದಿದೆ. ಅಲ್ಲದೆ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಸೇನೆ, ನಾವು ನಾಗರೀಕರ ಮೇಲೆ ಗುಂಡು ಹಾರಿಸಿಲ್ಲ. ಸೇನಾಪಡೆಗಳತ್ತ ಶಂಕಿತ ವಸ್ತುವನ್ನು ಎಸೆದ ಶಂಕಿತರ ಮೇಲೆ ಆತನನ್ನು ಬೆದರಿಸಲು ಗುಂಡು ಹಾರಿಸಿದ್ದೇವೆ ಎಂದು ಹೇಳಿದೆ.

'ನಬ್ಲಸ್​​ನ ದಕ್ಷಿಣಕ್ಕೆ ಕುಸ್ರಾ ಹಳ್ಳಿಯ ಪಕ್ಕದಲ್ಲಿ ಪ್ಯಾಲೆಸ್ಟೇನಿಯಾ ಹಾಗೂ ಇಸ್ರೇಲಿ ವಸಾಹತುಗಾರರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ಸಮಯದಲ್ಲಿ ಕಲ್ಲು ತೂರಾಟ ನಡೆಯಿತು. ಅಲ್ಲಿದ್ದ ಸೈನಿಕರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದು, ಈ ವೇಳೆ ಯುವಕನೊಬ್ಬ ಸೇನೆಯ ಮೇಲೆ ಸ್ಫೋಟಕ ವಸ್ತು  ಎಸೆದಿದ್ದಾನೆ. ಅವನಿಗೆ ಬೆದರಿಸಲು ಫೈರಿಂಗ್ ಮಾಡಲಾಯಿತು. ಆ ವೇಳೆ ಘಟನೆ ಸಂಭವಿಸಿದೆ ಎಂದು ಸಮಜಾಯಿಷಿ ನೀಡಿದೆ.

1967 ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್ ಪ್ರದೇಶವಾದ ವೆಸ್ಟ್ ಬ್ಯಾಂಕ್‌ನಲ್ಲಿ ಯಹೂದಿ ವಸಾಹತುಗಳು ಹೆಚ್ಚುತ್ತಿವೆ. ಹಾಗಾಗಿ ಪ್ಯಾಲೆಸ್ಟೇನ್​ ಮತ್ತು ಇಸ್ರೇಲ್​ ವಸಾಹತುಗಾರರು ಮತ್ತು ಸೇನೆಯ ನಡುವಿನ ಘರ್ಷಣೆ ಸಾಮಾನ್ಯವಾಗಿದೆ. ಬೀಟಾ ಗ್ರಾಮದ ಬಳಿ ಅಕ್ರಮವಾಗಿ ಯಹೂದಿಗಳು ವಾಸಿಸುತ್ತಿದ್ದು, ಪ್ಯಾಲೆಸ್ಟೇನಿಯಾದವರು ತೀವ್ರ ಪ್ರತಿಭಟನೆ ನಡೆಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ನಬ್ಲಸ್ ಪ್ರದೇಶ ಉದ್ವಿಗ್ನತೆಗೆ ಸಾಕ್ಷಿಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com