ಅಮೆರಿಕ: ಸಿನ್ಸಿನ್ನಾಟಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ವೇಳೆ ಶೂಟೌಟ್, ಇಬ್ಬರ ಸಾವು

ಅಮೆರಿಕ ಸ್ವಾತಂತ್ರ್ಯೋತ್ಸವ ದಿನವಾದ ಜುಲೈ 4 ರಂದು ಸಿನ್ಸಿನ್ಸಾಟಿಯಲ್ಲಿ ನಡೆದ ಶೂಟೌಟ್ ನಲ್ಲಿ ಇಬ್ಬರ ಹತ್ಯೆಯಾಗಿದ್ದು, ಮೂವರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿನ್ಸಿನ್ನಾಟಿ: ಅಮೆರಿಕ ಸ್ವಾತಂತ್ರ್ಯೋತ್ಸವ ದಿನವಾದ ಜುಲೈ 4 ರಂದು ಸಿನ್ಸಿನ್ಸಾಟಿಯಲ್ಲಿ ನಡೆದ ಶೂಟೌಟ್ ನಲ್ಲಿ ಇಬ್ಬರ ಹತ್ಯೆಯಾಗಿದ್ದು, ಮೂವರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ರಾತ್ರಿ ಸಿನ್ಸಿನ್ನಾಟಿಯ ಸ್ಮೆಲ್ ಪಾರ್ಕ್ ಲಿಮಿಟೆಡ್ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿರುವುದಾಗಿ ಕರ್ನಲ್ ಲಿಸಾ ಡೇವಿಸ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಒಬ್ಬ ವ್ಯಕ್ತಿ ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೊರ್ವ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಟ್ಟಣೆಯ ಪಾರ್ಕ್ ನಲ್ಲಿ ಪಟಾಕಿಗಳ ಮಧ್ಯೆ ಈ ಘಟನೆ ಸಂಭವಿಸಿದೆ. ಶೂಟಿಂಗ್ ನಡೆದಾಗ 400ರಿಂದ 500 ಯುವಕರು ಪಾರ್ಕ್ ನಲ್ಲಿದ್ದರು. ಗುಂಡು ಹಾರಿಸಿದ ಜನರ ವಯಸ್ಸು ತಕ್ಷಣ ಲಭ್ಯವಿಲ್ಲ. ಪೊಲೀಸರಿಗೆ ತಕ್ಷಣ ಶಂಕಿತನ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಡೇವಿಸ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com