ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 5.4 ಏರಿಕೆ ಮಾಡಿದ ಇಮ್ರಾನ್‌ ಖಾನ್ ಸರ್ಕಾರ

ಪಾಕಿಸ್ತಾನ ರಾಷ್ಟ್ರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ ರೂ.5.4 ರಷ್ಟು ಮತ್ತು ಹೈ-ಸ್ಪೀಡ್‌ ಡೀಸೆಲ್‌ (ಎಚ್‌ಎಸ್‌ಡಿ) ದರವನ್ನು ರೂ.2.54 ರಷ್ಟು ಹೆಚ್ಚಳ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್:‌ ಪಾಕಿಸ್ತಾನ ರಾಷ್ಟ್ರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ ರೂ.5.4 ರಷ್ಟು ಮತ್ತು ಹೈ-ಸ್ಪೀಡ್‌ ಡೀಸೆಲ್‌ (ಎಚ್‌ಎಸ್‌ಡಿ) ದರವನ್ನು ರೂ.2.54 ರಷ್ಟು ಹೆಚ್ಚಳ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ತೆಹ್ರೀಕ್‌-ಐ-ಇನ್ಸಾಫ್‌ ಸರ್ಕಾರವು ಪಾಕಿಸ್ತಾನದಲ್ಲಿ ಗುರುವಾರ ಇಂಧನ ದರ ಏರಿಕೆ ಮಾಡಿರುವ ಬಗ್ಗೆ ಡಾನ್‌ ವರದಿ ಮಾಡಿದೆ. 

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಪ್ರಸ್ತುತ ಪ್ರತಿ ಲೀಟರ್‌ ಪೆಟ್ರೋಲ್‌ ದರ ರೂ. 118.09ಗೆ ತಲುಪಿದ್ದರೆ, ಪ್ರತಿ ಲೀಟರ್‌ ಡೀಸೆಲ್‌ ದರ ರೂ. 116.5ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಇದರಂತೆ ಸೀಮೆಎಣ್ಣೆ ಮತ್ತು ಲೈಟ್‌-ಡೀಸೆಲ್‌ ಕ್ರಮವಾಗಿ ರೂ. 1.39 ಮತ್ತು ರೂ.1.27 ಹೆಚ್ಚಳಗೊಂಡಿವೆ. ಪರಿಷ್ಕೃತ ದರದಂತೆ ಸೀಮೆಎಣ್ಣೆ ಬೆಲೆ ರೂ. 87.14 ಹಾಗೂ ಲೈಟ್‌-ಡೀಸೆಲ್‌ ದರ ರೂ.84.67 ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್‌ ದರವನ್ನು ಪ್ರತಿ ಲೀಟರ್‌ಗೆ ₹ 11.4 ಹೆಚ್ಚಿಸುವಂತೆ ಒಜಿಆರ್‌ಎ ಶಿಫಾರಸು ಮಾಡಿತ್ತು ಎಂದು ಪ್ರಧಾನ ಮಂತ್ರಿಗಳ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕ (ಎಸ್‌ಎಪಿಎಂ) ಶಹಬಾಜ್‌ ಗಿಲ್‌ ಹೇಳಿದ್ದಾರೆ. 

ಪ್ರಧಾನಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಒಜಿಆರ್‌ಎ ಶಿಫಾರಸುಗಳಿಗೆ ವಿರುದ್ಧವಾಗಿ, ಪ್ರತಿ ಲೀಟರ್‌ಗೆ 5.40 ರೂ.ಗಳನ್ನು ಮಾತ್ರವೇ ಹೆಚ್ಚಿಸಲು ಅನುಮೋದಿಸಿದ್ದಾರೆʼ ಎಂದು ಟ್ವೀಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com