ಜಪಾನ್ ನಲ್ಲಿ ಕೋವಿಡ್ ಸೋಂಕು ಹೆಚ್ಚಳ; ರಾಜಧಾನಿ ಟೋಕಿಯೊ ಸೇರಿದಂತೆ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

ಜಪಾನ್ ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ಜಪಾನ್ ಸರ್ಕಾರ ರಾಜಧಾನಿ ಟೋಕಿಯೋ ಸೇರಿದಂತೆ ಆರು ನಗರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಜಪಾನ್ ನಲ್ಲಿ ಕೋವಿಡ್ ಸೋಂಕು
ಜಪಾನ್ ನಲ್ಲಿ ಕೋವಿಡ್ ಸೋಂಕು

ಟೋಕಿಯೊ: ಜಪಾನ್ ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ಜಪಾನ್ ಸರ್ಕಾರ ರಾಜಧಾನಿ ಟೋಕಿಯೋ ಸೇರಿದಂತೆ ಆರು ನಗರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಜಪಾನ್ ನ ಟೋಕಿಯೊ, ಸೈತಮಾ, ಚಿಬಾ, ಕನಗವಾ, ಒಸಾಕಾ ಮತ್ತು ಒಕಿನಾವಾ ಪ್ರಾಂತ್ಯಗಳಿಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ನೆರೆಯ ಹೊಕ್ಕೈಡೊ, ಇಶಿಕಾವಾ, ಕ್ಯೋಟೋ, ಹ್ಯೋಗೊ ಮತ್ತು ಫುಕುವೊಕಾ ಪ್ರಾಂತ್ಯಗಳಿಗೆ ರೋಗ ಹರಡುವುದನ್ನು ತಡೆಯುವಂತೆ ಸ್ಥಳೀಯ ಆಡಳಿತಗಳಿಗೆ  ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಈ ಕುರಿತು ಮಾತನಾಡಿರುವ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರು, ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾದ ಹಿನ್ನಲೆಯಲ್ಲಿ ಟೋಕಿಯೊ, ಸೈತಮಾ, ಚಿಬಾ, ಕನಗವಾ, ಒಸಾಕಾ ಮತ್ತು ಒಕಿನಾವಾ ಪ್ರಾಂತ್ಯಗಳಿಗೆ ತುರ್ತು ಪರಿಸ್ಥಿತಿ ಹೇರಲು ಮತ್ತು ಆದ್ಯತೆಯ ಕ್ರಮಗಳನ್ನು  ಅನ್ವಯಿಸಲು ನಾವು ನಿರ್ಧರಿಸಿದ್ದೇವೆ. ಹೊಕ್ಕೈಡೊ, ಇಶಿಕಾವಾ, ಕ್ಯೋಟೋ, ಹ್ಯೋಗೊ ಮತ್ತು ಫುಕುವೊಕಾ ಪ್ರಾಂತ್ಯಗಳಿಗೆ ರೋಗ ಹರಡುವುದನ್ನು ಕೂಡಲೇ ತಡೆಯಬೇಕಿದೆ ಎಂದು ಹೇಳಿದ್ದಾರೆ.

ಅಂತೆಯೇ ಜನರು ಅನಿವಾರ್ಯವಲ್ಲದ, ತುರ್ತು ಅಲ್ಲದ ಕಾರಣಗಳಿಗಾಗಿ ಹೊರಗೆ ಹೋಗುವುದನ್ನು ಅಥವಾ ಪ್ರಯಾಣಿಸುವುದನ್ನು ತಡೆಯಬೇಕು. ಇತರ ಪ್ರಯಾಣದ ಸಮಯದಲ್ಲಿ ತಮ್ಮ ಊರುಗಳಿಗೆ ಹಿಂದಿರುಗುವ ಬಗ್ಗೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಮತ್ತು ಸಂಯಮದಿಂದ ಇರಬೇಕೆಂದು ವಿನಂತಿಸಿದ್ದಾರೆ.

ಅಲ್ಲದೆ ಇಂದಿನಿಂದ, ನಾವು ಯುವ ಪೀಳಿಗೆಯ ಜನರಿಗೆ ಅಂದರೆ ಯುವಕರಿಗೆ ಲಸಿಕೆಗಳನ್ನು ನೀಡುವುದರ ಮೇಲೆ ಗಮನ ಹರಿಸುತ್ತೇವೆ, ಆಗಸ್ಟ್ ಕೊನೆಯವಾರದ ವೇಳೆ ಶೇ.40 ಸಾರ್ವಜನಿಕರಿಗೆ ಎರಡನೇ ಡೋಸ್ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com