ಕುಟುಂಬ ಯೋಜನೆ ನೀತಿ ಸಡಿಲಿಸಿದ ಚೀನಾ: ಮೂರು ಮಕ್ಕಳು ಪಡೆಯಲು ದಂಪತಿಗಳಿಗೆ ಅವಕಾಶ

ಚೀನಾ ಸರ್ಕಾರ ಕುಟುಂಬ ಯೋಜನೆ ನೀತಿಯನ್ನು ಸಡಿಲಗೊಳಿಸಿದ್ದು, ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಚೀನಾ ಸರ್ಕಾರ ಕುಟುಂಬ ಯೋಜನೆ ನೀತಿಯನ್ನು ಸಡಿಲಗೊಳಿಸಿದ್ದು, ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ.

ಚೀನಾವು 2016 ರಲ್ಲಿ 'ಒಂದು ಮಕ್ಕಳ ನೀತಿ' ಯನ್ನು ಹೊಂದಿದ್ದು, ಇದು ದೇಶದ ಜನಸಂಖ್ಯೆಯ ರಚನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ವೃದ್ಧರ ಸೃಷ್ಟಿಗೆ ಕಾರಣವಾಗಿದೆ. ದಂಪತಿಗಳಿಗೆ ಇಬ್ಬರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಈ ಮೊದಲು ಅವಕಾಶ ನೀಡಿತ್ತಾದರೂ, ಇತ್ತೀಚಿನ ಕ್ರಮವು ಚೀನಾದ ಜನಸಂಖ್ಯಾ ರಚನೆಯನ್ನು ಸುಧಾರಿಸುವ ಮತ್ತು ದೇಶದ ವಯಸ್ಸಾದ ಸಮಸ್ಯೆಯಿಂದ ಎದುರಾಗುವ ಸವಾಲನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಅಂತೆಯೇ ಮಾತೃತ್ವ ರಜೆ ಮತ್ತು ಮಾತೃತ್ವ ವಿಮಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಪೋಷಕ ನೀತಿಗಳನ್ನು ಬಲಪಡಿಸಲು ಚೀನಾದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಚೀನಾ ಸುಮಾರು 40 ವರ್ಷಗಳ ಕಾಲ 'ಒಂದೇ ಮಗು' ನೀತಿಯನ್ನು ಕಡ್ಡಾಯವಾಗಿ ಅನುಸರಿಕೊಂಡು ಬಂದಿತ್ತು. ಆದರೆ, ಜನರಿಗೆ ವಯಸ್ಸಾಗುತ್ತಿರುವುದರಿಂದ ಅದು, ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತವಾಗಿತ್ತು.

ಇತ್ತೀಚಿನ ಚೀನಾದ ಜನಗಣತಿಯು 2020ಕ್ಕೆ ಪ್ರತಿ ಮಹಿಳೆಗೆ ಕೇವಲ 1.3 ಮಕ್ಕಳಿಗೆ ಫಲವತ್ತತೆ ಪ್ರಮಾಣವನ್ನು ನೀಡುತ್ತದೆ, ಇದು ಜಪಾನ್ ಮತ್ತು ಇಟಲಿಯಂತಹ ವಯಸ್ಸಾದ ಸಮಾಜಗಳಿಗೆ ಸಮನಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com