ಭಾರತ ಮೂಲದ ಹಿರಿಯ ಪತ್ರಕರ್ತ ತೇಜಿಂದರ್ ಸಿಂಗ್ ನಿಧನ: ಪೆಂಟಗನ್ ಸಂತಾಪ

ಶ್ವೇತಭವನದ ಹಿರಿಯ ವರದಿಗಾರ ಮತ್ತು ಇಂಡಿಯಾ ಅಮೇರಿಕಾ ಟುಡೆ ನ್ಯೂಸ್‌ವೈರ್‌ನ ಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ಯುಎಸ್‌ನಲ್ಲಿ ನಿಧನ ಹೊಂದಿದ್ದಾರೆ.
ತೇಜಿಂದರ್ ಸಿಂಗ್
ತೇಜಿಂದರ್ ಸಿಂಗ್

ವಾಷಿಂಗ್ಟನ್: ಶ್ವೇತಭವನದ ಹಿರಿಯ ವರದಿಗಾರ ಮತ್ತು ಇಂಡಿಯಾ ಅಮೇರಿಕಾ ಟುಡೆ ನ್ಯೂಸ್‌ವೈರ್‌ನ ಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ಯುಎಸ್‌ನಲ್ಲಿ ನಿಧನ ಹೊಂದಿದ್ದಾರೆ.

ವಾಷಿಂಗ್ಟನ್ ಡಿ.ಸಿ ಮೂಲದ ಸ್ವತಂತ್ರ ಮಾಧ್ಯಮ ಸಂಸ್ಥೆ ಇಂಡಿಯಾ ಅಮೇರಿಕಾ ಟುಡೆ ಅನ್ನು ಸಿಂಗ್ ಸ್ಥಾಪಿಸಿದ್ದರು.

"ಇಂಡಿಯಾ ಅಮೇರಿಕಾ ಟುಡೆ ಸಂಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ನಿಧನವನ್ನು ಘೋಷಿಸಲು ಅಪಾರ ದುಃಖವಾಗುತ್ತಿದೆ. ಅವರು 2012 ರಲ್ಲಿ ಐಎಟಿಯನ್ನು ಪ್ರಾರಂಭಿಸಿದರು, ಮತ್ತು ಅವರು ಪ್ರಾರಂಭಿಸಿದ ಕೆಲಸವನ್ನು ನಾವು ಮುಂದುವರಿಸುತ್ತೇವೆ. " ಎಂದು ಮಾಧ್ಯಮ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ತಿಳಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಎಫ್ ಕಿರ್ಬಿ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ತೇಜಿಂದರ್ ಸಿಂಗ್ ಅವರ ನಿಧನಕ್ಕೆ ನಮ್ಮ ಸಂತಾಪವಿದೆ.ಇಂಡಿಯಾ ಅಮೇರಿಕಾ ಟುಡೇ ಸ್ಥಾಪಕ ಮತ್ತು ಸಂಪಾದಕ ಅವರೆಂದು ನಿಮಗೆಲ್ಲಾ ತಿಳಿದಿದೆ. ಅವರ ಕುಟುಂಬಕ್ಕೆ ನಮ್ಮ ಸಹಾನುಭೂತಿ ಇದೆ." ಅವರು ಹೇಳಿದರು.

"ಅವರು 2011 ರಿಂದ ಪೆಂಟಗನ್ ವರದಿಗಾರರಾಗಿದ್ದರು, ಮತ್ತು ನಾನು ಅವರೊಂದಿಗೆ ಈ ವೇದಿಕೆಯಿಂದ ವ್ಯವಹರಿಸಿದ್ದಾರೆ. , ನಾನು ಸ್ಟೇಟ್ ಡಿಪಾರ್ಟ್ ಮೆಂಟ್ ನಲ್ಲಿದ್ದಾಗ  ಅವರೊಂದಿಗೆ ವ್ಯವಹರಿಸಿದ್ದೇನೆ ಮತ್ತು ಅವರೊಬ್ಬ ಸಂಭಾವಿತ ವ್ಯಕ್ತಿಯಾಗಿದ್ದರು." 

"ಅವರು ನಿಜವಾದ ಸಂಭಾವಿತ ವ್ಯಕ್ತಿ, ಒಳ್ಳೆಯ ವರದಿಗಾರ, ಕಠಿಣ ಪ್ರಶ್ನೆಗಳನ್ನಿಟ್ಟು ಒಳ್ಳೆಯ ವಿಷಯಗಳನ್ನು ಬರೆದಿದ್ದಾರೆ."

ಅವರು ಏಷ್ಯನ್ ಅಮೇರಿಕನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ (ಎಎಜೆಎ-ಡಿಸಿ) 2011-12ರ ಉಪಾಧ್ಯಕ್ಷರಾಗಿದ್ದರು(ಪ್ರೆಸ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com