ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಎರಡು ರೈಲುಗಳ ಪರಸ್ಪರ ಡಿಕ್ಕಿ: 30 ಪ್ರಯಾಣಿಕರು ಸಾವು, 50 ಮಂದಿಗೆ ಗಾಯ
ಪಾಕಿಸ್ತಾನದ ಗೊಟ್ಕಿ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಪ್ರಯಾಣಿಕ ರೈಲು ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ 30 ಪ್ರಯಾಣಿಕರು ಮೃತಪಟ್ಟ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಟ್ಕಿ ಜಿಲ್ಲೆಯಲ್ಲಿ ನಡೆದಿದೆ.
Published: 07th June 2021 09:08 AM | Last Updated: 07th June 2021 12:50 PM | A+A A-

ಅಪಘಾತಕ್ಕೀಡಾದ ರೈಲು
ಗೊಟ್ಕಿ(ಪಾಕಿಸ್ತಾನ): ಪಾಕಿಸ್ತಾನದ ಗೊಟ್ಕಿ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಪ್ರಯಾಣಿಕ ರೈಲು ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ 30 ಪ್ರಯಾಣಿಕರು ಮೃತಪಟ್ಟ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಟ್ಕಿ ಜಿಲ್ಲೆಯಲ್ಲಿ ನಡೆದಿದೆ.
ದುರ್ಘಟನೆಯಲ್ಲಿ ಹಲವು ಪ್ರಯಾಣಿಕರ ಗಾಯವಾಗಿದೆ. ಸಿಂಧ್ ಪ್ರಾಂತ್ಯದ ರೆಟಿ ಮತ್ತು ದಹರ್ಕಿ ರೈಲು ನಿಲ್ಧಾಣದ ಮಧ್ಯೆ ಈ ದುರಂತ ಇಂದು ಬೆಳಗ್ಗೆ ಸಂಭವಿಸಿದೆ ಎಂದು ಪಾಕಿಸ್ತಾನದ ಎಆರ್ ವೈ ನ್ಯೂಸ್ ವರದಿ ಮಾಡಿದೆ.
ಲಾಹೋರ್ ಕಡೆಯಿಂದ ಹೊರಟಿದ್ದ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಮಿಲಾತ್ ಎಕ್ಸ್ ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಮಿಲಾತ್ ಎಕ್ಸ್ ಪ್ರೆಸ್ ರೈಲು ಕರಾಚಿಯಿಂದ ಸರಗೋಢ ಕಡೆಗೆ ಬರುತ್ತಿತ್ತು.
ಮಿಲಾತ್ ಎಕ್ಸ್ ಪ್ರೆಸ್ ನ 13 ಬೋಗಿಗಳು ಹಳಿ ತಪ್ಪಿದ್ದು 8 ಬೋಗಿಗಳು ನುಜ್ಜುಗುಜ್ಜಾಗಿವೆ. ರೈಲುಗಳ ಅವಶೇಷಗಳಡಿಯಲ್ಲಿ ಹಲವರು ಸಿಕ್ಕಿಹಾಕಿಕೊಂಡಿದ್ದಾರೆ. ಪಾಕಿಸ್ತಾನ ರೇಂಜರ್ಸ್ ಸಿಂಧ್ ಗೆ ಸೇರಿದ ಭದ್ರತಾ ಪಡೆಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದು, ಕಾರ್ಯಾಚರಣೆಗೆ ಕಷ್ಟವಾಗುತ್ತಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ತನಿಖೆಗೆ ಆದೇಶ: ರೈಲು ಅಪಘಾತದ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ತೆರಳಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಂತೆ ಮತ್ತು ಮೃತರ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವಂತೆ ಇಮ್ರಾನ್ ಖಾನ್ ರೈಲ್ವೆ ಸಚಿವರಿಗೆ ಸೂಚಿಸಿದ್ದಾರೆ.
ರೈಲುಗಳ ಡಿಕ್ಕಿಗೆ ಕಾರಣವೇನು, ಸುರಕ್ಷತೆಯಲ್ಲಿ ಲೋಪದೋಷವುಂಟಾಗಲು ಕಾರಣವೇನು ಎಂದು ತಿಳಿಯಲು ಪ್ರಧಾನಿ ಇಮ್ರಾನ್ ಖಾನ್ ವಿಸ್ತ್ರೃತ ತನಿಖೆಗೆ ಆದೇಶ ನೀಡಿದ್ದಾರೆ.
Shocked by the horrific train accident at Ghotki early this morning leaving 30 passengers dead. Have asked Railway Minister to reach site & ensure medical assistance to injured & support for families of the dead. Ordering comprehensive investigation into railway safety faultlines
— Imran Khan (@ImranKhanPTI) June 7, 2021
#BREAKING #Pakistan Train #Accident. #Millat Express collides with Sir Sayyed Express (DN). Incident happened near #Daharki (in between Sukkur & Sadiqabad). Many casualties expected. pic.twitter.com/i2CD0sZnr3
— Chaudhary Parvez (@chaudharyparvez) June 7, 2021