ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿಮಾನ ತುರ್ತು ಭೂ ಸ್ಪರ್ಶ!

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತಾಗಿ ಭೂಸ್ಪರ್ಶ ಮಾಡಿದೆ. 
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಏರ್‌ಪೋರ್ಸ್‌-2 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಕೂಡಲೇ ವಿಮಾನವನ್ನು ಮತ್ತೆ ಮೇರಿ ಲ್ಯಾಂಡ್‌ ನಲ್ಲಿ ಲ್ಯಾಂಡಿಂಗ್‌ ಮಾಡುವ ಮೂಲಕ ದೊಡ್ಡ ಪ್ರಮಾದ ತಪ್ಪಿಸಿದ್ದಾರೆ.

ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಮತ್ತೊಂದು ವಿಮಾನದ ಮೂಲಕ ಪ್ರವಾಸ ಮುಂದುವರಿಸುವ ನಿರೀಕ್ಷೆಯಿದೆ ಎಂದು ವಕ್ತಾರ ಸೈಮನ್ ಸ್ಯಾಂಡರ್ಸ್ ಹೇಳಿದ್ದಾರೆ. ಇದು ಕೇವಲ ತಾಂತ್ರಿಕ ಸಮಸ್ಯೆ. ಯಾವುದೇ ಭದ್ರತಾ ಸಮಸ್ಯೆಯಲ್ಲ ಎಂದು ಸ್ಯಾಂಡರ್ಸ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ತಾವು ಸುರಕ್ಷಿತವಾಗಿರುವುದಾಗಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮೆರಿಕಾ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕಮಲಾ ಹ್ಯಾರಿಸ್‌ ವಿದೇಶ ಪ್ರವಾಸಕ್ಕೆ ತೆರಳಿದರು. ಮೇರಿಲ್ಯಾಂಡ್‌ನಿಂದ ಗ್ವಾಟೆಮಾಲಾ ಹಾಗೂ ಮೆಕ್ಸಿಕೊ ಪ್ರವಾಸಕ್ಕಾಗಿ ಏರ್‌ಫೋರ್ಸ್‌ 2 ವಿಮಾನ ಹೊರಟಿತು. ಆದರೆ, ಟೇಕ್‌ಆಫ್ ಆದ 25 ನಿಮಿಷಗಳ ನಂತರ, ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಗಮನಿಸಿದ ಪೈಲೆಟ್‌ಗಳು, ವಿಮಾನವನ್ನು ಕೂಡಲೇ ಮೇರಿ ಲ್ಯಾಂಡ್‌ಕಡೆ ತಿರುಗಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com