ಮೆಹುಲ್ ಚೋಕ್ಸಿ ಜಾಮೀನು ಅರ್ಜಿ ವಿಚಾರಣೆ ಜೂನ್ 11ಕ್ಕೆ ಮುಂದೂಡಿಕೆ

ಪರಾರಿಯಾದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಜೂನ್ 11 ಕ್ಕೆ ಮುಂದೂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಪರಾರಿಯಾದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಜೂನ್ 11 ಕ್ಕೆ ಮುಂದೂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದ ನಂತರ ಚೋಕ್ಸಿ ಹೈಕೋರ್ಟ್ ಮೊರೆಹೋಗಿದ್ದರು.

ಜಾಮೀನು ವಿಚಾರಣೆಯು ಹೈಕೋರ್ಟ್ ನ್ಯಾಯಾಧೀಶ ವಿನಾಂಟೆ ಆಡ್ರಿಯನ್-ರಾಬರ್ಟ್ಸ್ ಅವರ ಮುಂದೆ ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಚೋಕ್ಸಿಯ ಸ್ಥಳೀಯ ಕಾನೂನು ತಂಡದ ಜೂಲಿಯನ್ ಪ್ರಿವೊಸ್ಟ್, ವೇಯ್ನ್ ನಾರ್ಡೆ, ವೇಯ್ನ್ ಮಾರ್ಷ್ ಮತ್ತು ಕಾರಾ ಶಿಲ್ಲಿಂಗ್ಫೋರ್ಡ್-ಮಾರ್ಷ್ ಅವರ ಮನವಿಯ ಮೇರೆಗೆ ನಡೆಯಿತು.

ಪಬ್ಲಿಕ್ ಪ್ರಾಸಿಕ್ಯೂಷನ್ ಡೈರೆಕ್ಟರ್ ಶೆರ್ಮಾ ಡಾಲ್ರಿಂಪಲ್ ಪ್ರತಿನಿಧಿಸುವ ಸರ್ಕಾರದ ಕಡೆಯ ವಕೀಲರು ಚೋಕ್ಸಿ ಫ್ಲೈಟ್ ರಿಕ್ಸ್ ಎಂದದ್ದನ್ನು ತೀವ್ರವಾಗಿ ಆಕ್ಷೇಪಿಸಿದರು ಎಂದು ಡೊಮಿನಿಕಾ ನ್ಯೂಸ್ ಆನ್‌ಲೈನ್ ವರದಿ ಮಾಡಿದೆ. ನ್ಯಾಯಾಧೀಶರು ಈ ವಿಷಯವನ್ನು ಜೂನ್ 11 ಕ್ಕೆ ಮುಂದೂಡಿದ್ದಾರೆ ಎಂದು ಅದು ಹೇಳಿದೆ.

ಚೋಕ್ಸಿ ಅವರ ಟೀಂ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ನ ಪ್ರತ್ಯೇಕ ವಿಷಯವನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ, ಇದರ ವಿಚಾರಣೆಯನ್ನು ಸಹ ಮುಂದೂಡಲಾಗಿದೆ.

ಚೋಕ್ಸಿ ಅವರು ಮೇ 23 ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು, ಅಲ್ಲಿ ಅವರು ನಾಗರಿಕರಾಗಿ 2018 ರಿಂದ ತಂಗಿದ್ದರು. ತನ್ನ ಗೆಳತಿಯೊಂದಿಗೆ ಸಂಬಂಧ ಕಡಿದುಕೊಳ್ಳುವುದರೊಡನೆ ಅವರನ್ನು ಅಕ್ರಮ ಪ್ರವೇಶಕ್ಕಾಗಿ ನೆರೆಯ ದ್ವೀಪ ದೇಶ ಡೊಮಿನಿಕಾದಲ್ಲಿ ಬಂಧಿಸಲಾಯಿತು.

ಆಂಟಿಗುವಾನ್‌ನ ಜಾಲಿ ಹಾರ್ಬರ್‌ನಿಂದ ಆಂಟಿಗುವಾನ್ ಮತ್ತು ಇಂಡಿಯನ್‌ನಂತೆ ಕಾಣುವ ಪೊಲೀಸರು ಆತನನ್ನು ಅಪಹರಿಸಿ ದೋಣಿಯಲ್ಲಿ ಡೊಮಿನಿಕಾಗೆ ಕರೆತಂದರು ಎಂದು ಅವರ ವಕೀಲರು ಆರೋಪಿಸಿದರು. ಹೈಬೋರ್ಟ್ ನ್ಯಾಯಾಧೀಶ ಬರ್ನಿ ಸ್ಟೀಫನ್ಸನ್ ಅವರ ಆದೇಶದ ಮೇರೆಗೆ ಉದ್ಯಮಿಯನ್ನು ರೋಸೌ ಮ್ಯಾಜಿಸ್ಟ್ರೇಟ್ ಮುಂದೆ ಕರೆತಂದರು, ಹೇಬಿಯಸ್ ಕಾರ್ಪಸ್ ವಿಷಯವನ್ನು ಆಲಿಸಿ, ಅಕ್ರಮ ಪ್ರವೇಶದ ಆರೋಪಗಳಿಗೆ ಉತ್ತರಿಸಲು ಅವರು ತಪ್ಪಿತಸ್ಥರೆಂದು ಒಪ್ಪಿಕೊಂಡರು ಆದರೆ ಜಾಮೀನು ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com