'ಕೋವಾಕ್ಸ್' ಅಭಿಯಾನದಡಿ ಅಮೆರಿಕಾ ಜಾಗತಿಕವಾಗಿ ಹಂಚಲಿರುವ 8 ಕೋಟಿ ಲಸಿಕೆ ಪೈಕಿ ಭಾರತಕ್ಕೂ ಪಾಲು!

ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನದ ಅಡಿಯಲ್ಲಿ ಬಳಕೆಯಾಗದೆ ದಾಸ್ತಾನು ಮಾಡಲಾಗಿರುವ 80 ಮಿಲಿಯನ್ ಅಮೆರಿಕಾ ಬೆಂಬಲಿತ ಲಸಿಕೆಗಳ ಹಂಚಿಕೆ ಪೈಕಿ ಭಾರತ ಸಹ ತನ್ನ ಪಾಲನ್ನು ಪಡೆಯಲಿದೆ ಎಂದು ಬೈಡನ್ ಸರ್ಕಾರದ ರಾಜ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೋ ಬೈಡನ್
ಜೋ ಬೈಡನ್

ವಾಷಿಂಗ್ಟನ್: ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನದ ಅಡಿಯಲ್ಲಿ ಬಳಕೆಯಾಗದೆ ದಾಸ್ತಾನು ಮಾಡಲಾಗಿರುವ 80 ಮಿಲಿಯನ್ ಅಮೆರಿಕಾ ಬೆಂಬಲಿತ ಲಸಿಕೆ ಹಂಚಿಕೆ ಪೈಕಿ ಭಾರತ ಸಹ ತನ್ನ ಪಾಲನ್ನು ಪಡೆಯಲಿದೆ ಎಂದು ಬೈಡನ್ ಸರ್ಕಾರದ ರಾಜ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದ ಮೂಲಕ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ 80 ಮಿಲಿಯನ್ ಲಸಿಕೆಯನ್ನು ದಕ್ಷಿಣ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಘೋಷಿಸಿದ್ದರು. ಜೂನ್ 2ರಂದು ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮ ಪ್ರಾರಂಭವಾಗಿದ್ದು ಇಲ್ಲಿಯವರೆಗೂ 1.9 ಕೋಟಿ ಲಸಿಕೆಯನ್ನು ಪೂರೈಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ. 

ಜೂನ್ ಅಂತ್ಯದ ವೇಳೆಗೆ ಜಾಗತಿಕವಾಗಿ 80 ಮಿಲಿಯನ್(8 ಕೋಟಿ) ಲಸಿಕೆಗಳನ್ನು ಹಂಚುವ ಕಾರ್ಯಕ್ರಮವನ್ನು ಅಮೆರಿಕಾ ಹಾಕಿಕೊಂಡಿದೆ. ಇನ್ನು ಭಾರತದ ಪಾಲಿನ ಲಸಿಕೆಗಳು ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ಕುರಿತು ನನ್ನಲ್ಲಿ ನಿರ್ದಿಷ್ಟ ವಿವರಗಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. 

ಖಂಡಿತವಾಗಿಯೂ 80 ಮಿಲಿಯನ್ ಲಸಿಕೆ ಪೈಕಿ ಭಾರತವು ತನ್ನ ಪಾಲನ್ನು ಪಡೆಯುತ್ತದೆ. ಭಾರತಕ್ಕೆ ಸುಮಾರು ಆರು ಮಿಲಿಯನ್ ಕೋವಾಕ್ಸ್ ಲಸಿಕೆಗಳನ್ನು ನಿಗದಿಪಡಿಸಲಾಗಿದೆ ಎಂದು ನಾನು ನಂಬುತ್ತೇನೆ ಎಂದು ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೊರೋನಾ ಸಂಕಷ್ಟದ ನಡುವೆ ತೀವ್ರ ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ಭಾರತದಂತಹ ರಾಷ್ಟ್ರಗಳಿಗೆ ಅಮೆರಿಕಾ ಹೆಚ್ಚುವರಿ ಕೋವಿಡ್ -19 ಲಸಿಕೆಗಳನ್ನು ಕಳುಹಿಸಲು ಬೈಡೆನ್ ಆಡಳಿತವು ಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com