ಇರಾನ್ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ರೈಸಿ ಗೆ ಪ್ರಧಾನಿ ಮೋದಿ ಅಭಿನಂದನೆ

ಭಾರತ-ಇರಾನ್ ನಡುವಣ ಸಂಬಂಧವನ್ನು ಮತ್ತಷ್ಟು  ಬಲಪಡಿಸುವ ಅಗತ್ಯವಿದೆ ಎಂಬ ಆಶಯ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಇರಾನ್ ನಿಯೋಜಿತ ಅಧ್ಯಕ್ಷರೊಂದಿಗೆ ಕೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.
ಇರಾನ್ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ರೈಸಿ
ಇರಾನ್ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ರೈಸಿ

ನವದೆಹಲಿ: ಭಾರತ-ಇರಾನ್ ನಡುವಣ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಆಶಯ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಇರಾನ್ ನಿಯೋಜಿತ ಅಧ್ಯಕ್ಷರೊಂದಿಗೆ ಕೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.

ಭಾನುವಾರ, ಇಸ್ಲಾಮಿಕ್ ಗಣ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಇಬ್ರಾಹಿಂ ರೈಸಿ ಅವರನ್ನು ಅಭಿನಂದಿಸಿ ಮೋದಿ ಟ್ವೀಟ್ ಮಾಡಿದ್ದಾರೆ.

ಇರಾನ್ ಆಂತರಿಕ ಸಚಿವಾಲಯ ಭಾನುವಾರ ಬಿಡುಗಡೆ  ಮಾಡಿರುವ ಹೇಳಿಕೆಯಲ್ಲಿ  ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ, ಧರ್ಮಗುರು ಇಬ್ರಾಹಿಂ ರೈಸಿ ಇರಾನ್ ನ ಎಂಟನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದೆ.

ಚುನಾವಣೆಯಲ್ಲಿ ಇಬ್ರಾಹಿಂ ರೈಸಿ ಶೇ.61.95 ರಷ್ಟು ಮತಗಳನ್ನು ಗಳಿಸಿದ್ದಾರೆ. ರೈಸಿ ಆಗಸ್ಟ್ ನಲ್ಲಿ ಇರಾನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ಹಾಲಿ ಅಧ್ಯಕ್ಷ ಹಸನ್ ರೂಹಾನಿ ಅವರು ಸತತ ಮೂರನೇ ಅವಧಿಗೆ ಅಧ್ಯಕ್ಷ  ಸ್ಥಾನಕ್ಕೆ ಸ್ಪರ್ಧಿಸುವುದನ್ನು ಅಲ್ಲಿನ ಸಂವಿಧಾನ ನಿರ್ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com