ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿದ್ದ ಜರ್ಮನಿ ಚಾನ್ಸಿಲರ್ ಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ!

ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಮೊದಲ ಡೋಸ್ ಆಗಿ ಸ್ವೀಕರಿಸಿದ್ದ ಜರ್ಮನಿ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರಿಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ ನೀಡಲಾಗಿದೆ.
ಏಂಜೆಲಾ ಮರ್ಕೆಲ್
ಏಂಜೆಲಾ ಮರ್ಕೆಲ್

ಬರ್ಲಿನ್: ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಮೊದಲ ಡೋಸ್ ಆಗಿ ಸ್ವೀಕರಿಸಿದ್ದ ಜರ್ಮನಿ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರಿಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ ನೀಡಲಾಗಿದೆ.

ಈ ಕುರಿತಂತೆ ಜರ್ಮನಿ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದು, ಈ ಹಿಂದೆ ಜರ್ಮನಿ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರಿಗೆ ಕೋವಿಡ್ ಲಸಿಕೆ ಮೊದಲ ಡೋಸ್ ಆಗಿ ಆಸ್ಟ್ರಾಜೆನೆಕಾ ಲಸಿಕೆಯನ್ನು ನೀಡಲಾಗಿತ್ತು. ಇದೀಗ 2ನೇ ಡೋಸ್ ಆಗಿ ಮಾಡೆರ್ನಾ ಲಸಿಕೆ ನೀಡಲಾಗಿದೆ ಎಂದು ಬಿಬಿಸಿಗೆ ತಿಳಿಸಿದ್ದಾರೆ.

66 ವರ್ಷದ ಎಂಜೆಲಾ ಮಾರ್ಕೆಲ್ ಅವರಿಗೆ ಏಪ್ರಿಲ್‌ನಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಮೊದಲ ಡೋಸ್ ಆಗಿ ನೀಡಲಾಗಿತ್ತು. ಇದೀಗ ಈ ಮಿಶ್ರಣ ಲಸಿಕೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ತಜ್ಞರು, ಕೋವಿಡ್ ಲಸಿಕೆಗಳ ಮಿಶ್ರ ಡೋಸಿಂಗ್ ಒಳ್ಳೆಯದು. ಆದರೆ ಈ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನ ನಡೆಯಬೇಕಿದ್ದು,  ಈಗಲೇ ಈ ಬಗ್ಗೆ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com