ನೀರವ್ ಮೋದಿ ಹಸ್ತಾಂತರ ಮನವಿ ಯುಕೆ ಹೈಕೋರ್ಟ್ ನಲ್ಲಿ ತಿರಸ್ಕೃತ; ಮೌಖಿಕ ವಿಚಾರಣೆಗೆ ಮೇಲ್ಮನವಿ ಸಲ್ಲಿಸಲು 5 ದಿನ ಕಾಲಾವಕಾಶ

ಭಾರತಕ್ಕೆ ಬೇಕಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ನಮ್ಮ ದೇಶಕ್ಕೆ ಹಸ್ತಾಂತರಿಸಲು ಏಪ್ರಿಲ್ ನಲ್ಲಿ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಇಲ್ಲಿನ ಹೈಕೋರ್ಟ್ ನಲ್ಲಿ ಹಸ್ತಾಂತರದ ಮೇಲ್ಮನವಿಯ ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ನೀರವ್ ಮೋದಿ
ನೀರವ್ ಮೋದಿ

ಲಂಡನ್: ಭಾರತಕ್ಕೆ ಬೇಕಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಹಸ್ತಾಂತರಿಸಲು ಏಪ್ರಿಲ್ ನಲ್ಲಿ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಇಲ್ಲಿನ ಹೈಕೋರ್ಟ್ ನಲ್ಲಿ ಹಸ್ತಾಂತರದ ಮೇಲ್ಮನವಿಯ ಅರ್ಜಿ ಸಲ್ಲಿಸಿದ್ದು ಇದರ  ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಮೇಲ್ಮನವಿ ಸಲ್ಲಿಸುವ ಅನುಮತಿಯನ್ನು ಮಂಗಳವಾರ "ಲಿಖಿತವಾಗಿ ತಿರಸ್ಕರಿಸಲಾಗಿದೆ" ಎಂದು ಹೈಕೋರ್ಟ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಗೃಹ ಕಾರ್ಯದರ್ಶಿ ನಿರ್ಧಾರ ಅಥವಾ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಫೆಬ್ರವರಿ ತಿಂಗಳ  ತೀರ್ಪಿನ ವಿರುದ್ಧ ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವ ಪರವಾಗಿ ಮೇಲ್ಮನವಿ ಸಲ್ಲಿಸಲು ಯಾವುದೇ ಆಧಾರಗಳಿವೆಯೇ ಎಂದು ನಿರ್ಧರಿಸಲು ತೀರ್ಮಾನಿಸಲಾಗಿ ಹೈಕೋರ್ಟ್ ನ್ಯಾಯಾಧೀಶರ ಮುಂದೆ ಈ ಮನವಿ ಇತ್ತು.

ಇದು 50 ವರ್ಷದ ವಜ್ರದ ವ್ಯಾಪಾರಿಗೆ  ಹೈಕೋರ್ಟ್‌ನಲ್ಲಿ ಸಂಕ್ಷಿಪ್ತ ಮೌಖಿಕ ವಿಚಾರಣೆಯಲ್ಲಿ ತನ್ನ ಪ್ರಕರಣವನ್ನು ನವೀಕರಿಸಲು ಹಾಗೂ  ಪೂರ್ಣ ಮೇಲ್ಮನವಿ ವಿಚಾರಣೆಮುಂದುವರಿಯಬಹುದೇ ಎಂದು ನಿರ್ಧರಿಸಲು  ಕಾನೂನು ಮಾರ್ಗಸೂಚಿಗಳ ಪ್ರಕಾರ, ಮೇಲ್ಮನವಿಯಾಗಿ ನೀರವ್ ಮೋದಿಯವರು ಅಂತಹ ಮೌಖಿಕ ಪರಿಗಣನೆಗೆ ಅರ್ಜಿ ಸಲ್ಲಿಸಲು ಐದು ವ್ಯವಹಾರಿಕ ದಿನಗಳ ಕಾಲಾವಕಾಶ ಹೊಂದಿದ್ದು ಮುಂದಿನ ವಾರದ ತನಕ ಅವರಿಗೆ ಸಮಯವನ್ನು ನೀಡುತ್ತಾರೆ. ನವೀಕರಣ ಅರ್ಜಿ ಸಲ್ಲಿಸಿದರೆ, ಅದನ್ನು ವಿಚಾರಣೆಗೆ ಹೈಕೋರ್ಟ್ ನ್ಯಾಯಾಧೀಶರ ಮುಂದೆ ಪಟ್ಟಿ ಮಾಡಲಾಗುತ್ತದೆ.

ನೀರವ್ ಮೋದಿ ಅಂತಹ ಅರ್ಜಿ ಸಲ್ಲಿಸಲು  ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. "ಅವರು ಮೇಲ್ಮನವಿ ಸಲ್ಲಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸುತ್ತಾರೆಯೇ ಎಂದು ನಾವು ಕಾಯುತ್ತಿದ್ದೇವೆ. ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ನಾವು ಭಾರತ ಸರ್ಕಾರ  ಪರವಾಗಿ ಯಾವುದೇ ಮೇಲ್ಮನವಿ ವಿಚಾರಣೆಗೆ ಸ್ಪರ್ಧಿಸುತ್ತೇವೆ" ಎಂದು ಕ್ರೌನ್ ಪ್ರಾಸಿಕ್ಯೂಷನ್ ಸೇವೆ (ಸಿಪಿಎಸ್) ಭಾರತೀಯ ಅಧಿಕಾರಿಗಳ ಪರವಾಗಿ ನ್ಯಾಯಾಲಯದಲ್ಲಿ ಕಳೆದ ತಿಂಗಳು ಹೇಳಿದ್ದರು.

ಏತನ್ಮಧ್ಯೆ, ಎರಡು ವರ್ಷಗಳ ಹಿಂದೆ 2019 ರ ಮಾರ್ಚ್ 19 ರಂದು ಬಂಧನಕ್ಕೊಳಗಾದ ನಂತರ ನೀರವ್ ಮೋದಿ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.

ಫೆಬ್ರವರಿಯಲ್ಲಿ ನೀಡಿದ ತೀರ್ಪಿನಲ್ಲಿ, ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಗೂಜೀ ಅವರು ವಜ್ರ ವ್ಯಾಪಾರಿಗೆ ಭಾರತೀಯ ನ್ಯಾಯಾಲಯಗಳ ಮುಂದೆ ಉತ್ತರಿಸಲು ಒಂದು ಪ್ರಕರಣವಿದೆ ಎಂದ ಮಾತ್ರಕ್ಕೆ ಅದು  ಯುಕೆ ಕಾನೂನಿನಡಿಯಲ್ಲಿ ಹಸ್ತಾಂತರಿಸುವ ಪ್ರ್ಕರಿಯೆಅವರ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ತೀರ್ಮಾನಿಸಿದರು. ಅತ್ಯಂತ ಸಮಗ್ರ ತೀರ್ಪಿನ ಭಾಗವಾಗಿ, ಪಿಎನ್‌ಬಿ ವಂಚನೆ  ಪಿತೂರಿಗೆ ಸಂಬಂಧಿಸಿದಂತೆ ನೀರವ್ ಮೋದಿಯವರನ್ನು ಅಪರಾಧಿ ಎಂದು ಸಾಬೀತುಪಡಿಸುವ ಪುರಾವೆಗಳಿವೆ ಎಂದು ನ್ಯಾಯಾಧೀಶರು ತೀರ್ಮಾನಿಸಿದರು. ಮನಿ ಲಾಂಡರಿಂಗ್, ಸಾಕ್ಷಿಗಳ ಬೆದರಿಕೆ ಮತ್ತು ಸಾಕ್ಷ್ಯಗಳ ಕಣ್ಮರೆ ಸೇರಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಪಟ್ಟಿ ಮಾಡಿರುವ ವ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ "ಒಂದು ಪ್ರಾಥಮಿಕ ಪ್ರಕರಣವನ್ನು ಸ್ಥಾಪಿಸಲಾಗಿದೆ" ಎಂದು ಅವರು ಹೇಳಿದರು.

ನೀರವ್ ಮೋದಿ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ಮುಂಬೈನ ಬರಾಕ್ 12 ಆರ್ಥರ್ ರಸ್ತೆ ಜೈಲಿಗೆ ಸ್ಥಳಾಂತರವಾದರೆ ಭಾರತದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com