ಬಾಲಿವುಡ್ ಸಿನಿಮಾಗಳ ನಕಲು ಮಾಡುವುದು ಬಿಡಿ: ಪಾಕ್ ಸಿನಿ ನಿರ್ಮಾಪಕರಿಗೆ ಇಮ್ರಾನ್ ಖಾನ್

ದೇಶದ ಸಿನಿ ನಿರ್ಮಾಪಕರು ಮೂಲ ವಿಷಗಳನ್ನಿಟ್ಟು ಚಿತ್ರ ನಿರ್ಮಿಸಬೇಕು ಮತ್ತು ಬಾಲಿವುಡ್ ಅನ್ನು ನಕಲಿಸುವುದನ್ನು ಬಿಟ್ಟು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ದೇಶದ ಸಿನಿ ನಿರ್ಮಾಪಕರು ಮೂಲ ವಿಷಗಳನ್ನಿಟ್ಟು ಚಿತ್ರ ನಿರ್ಮಿಸಬೇಕು ಮತ್ತು ಬಾಲಿವುಡ್ ಅನ್ನು ನಕಲಿಸುವುದನ್ನು ಬಿಟ್ಟು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಕಿರುಚಿತ್ರೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಾನ್, ಪಾಕಿಸ್ತಾನದ ಚಲನಚಿತ್ರೋದ್ಯಮವು ಬಾಲಿವುಡ್‌ನಿಂದ ಪ್ರಭಾವಿತವಾದ ಕಾರಣ ಪ್ರಾರಂಬದಲ್ಲಿ ತಪ್ಪುಗಳು ಆಗಿದೆ, ಅಲ್ಲದೆ ಇದರ ಪರಿಣಾಮವಾಗಿ ಮತ್ತೊಂದು ಸಂಸ್ಕೃತಿಯನ್ನು ನಕಲಿಸಲು ಮತ್ತು ಅಳವಡಿಸಿಕೊಳ್ಳಲು ಕಾರಣವಾಗಿದೆ. "ಆದ್ದರಿಂದ ನಾನು ಯುವ ಚಲನಚಿತ್ರ ನಿರ್ಮಾಪಕರಿಗೆ ಹೇಳುವುದೇನೆಂದರೆ ನನ್ನ ಪ್ರಾಪಂಚಿಕ ಅನುಭವದ ಪ್ರಕಾರ, ಸ್ವಂತಿಕೆಯು ಮಾತ್ರ ಉತ್ತಮವಾಗಿರುತ್ತದೆ. ನಕಲಿ ವಿಷಯಗಳಿಗೆ ಯಾವುದೇ ಮೌಲ್ಯವಿಲ್ಲ" ಎಂದು ಪಾಕ್ ಪ್ರಧಾನಿ ಹೇಳಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಸ್ವಂತಿಕೆಯ ಮಹತ್ವವನ್ನು ಒತ್ತಿ ಹೇಳಿದ ಇಮ್ರಾನ್ ಖಾನ್ ಪಾಕಿಸ್ತಾನದ ಚಲನಚಿತ್ರೋದ್ಯಮಕ್ಕೆ ಹೊಸ ಆಲೋಚನಾ ವಿಧಾನ ಅಳವಡಿಸಿಕೊಳ್ಳಲು ಆಗ್ರಹಿಸಿದ್ದಾರೆ.

ಪಾಕಿಸ್ತಾನದ ಸಂಸ್ಕೃತಿಯ ಮೇಲೆ ಹಾಲಿವುಡ್ ಮತ್ತು ಬಾಲಿವುಡ್‌ನ ಪ್ರಭಾವವನ್ನು ಗಮನಿಸಿದ ಇಮ್ರಾನ್ ಖಾನ್, ಕಮರ್ಷಿಯಲ್ ವಿಷಯವನ್ನು ಸೇರಿಸದ ಹೊರತು ಜನರು ಸ್ಥಳೀಯ ಚಲನಚಿತ್ರಗಳನ್ನು ನೋಡುವುದಿಲ್ಲ ಎಂದು ಪದೇ ಪದೇ ಹೇಳಲಾಗುತ್ತಿದೆ "ಆದ್ದರಿಂದ ಯುವ ಚಲನಚಿತ್ರ ನಿರ್ಮಾಪಕರಿಗೆ ನನ್ನ (ಸಲಹೆ) ನಿಮ್ಮದೇ ಆದ ಮೂಲ ಆಲೋಚನೆಯನ್ನು ತೆರೆ ಮೇಲೆ ತರುವುದು ಮುಖ್ಯ, ವೈಫಲ್ಯಕ್ಕೆ ಹೆದರಬೇಡಿ. ಸೋಲಿನ ಭಯದಲ್ಲಿರುವವರು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ನನ್ನ ಜೀವನದ ಅನುಭವ" ಎಂದರು.

"ಭಯೋತ್ಪಾದನೆ ವಿರುದ್ಧದ ಯುದ್ಧ"ದ ಸಮಯದಲ್ಲಿ ಪಾಕಿಸ್ತಾದ ಚಿತ್ರಣ ತಪ್ಪಾಗಿ ನಿರೂಪಿಸಲ್ಪಟ್ತಾಗ ಕೀಳರಿಮೆ ಮತ್ತು ರಕ್ಷಣಾತ್ಮಕತೆಯ ಭಾವನೆಯನ್ನು ಆಧರಿಸಲಾಗಿತ್ತು" ಎಂದು ಅವರು ಹೇಳಿದರು. "ತಮ್ಮನ್ನು ಗೌರವಿಸುವ ವ್ಯಕ್ತಿಯನ್ನು ಜಗತ್ತು ಗೌರವಿಸುತ್ತದೆ" ಎಂದು ಅವರು ಹೇಳಿದರು, ಪಾಕಿಸ್ತಾನಿಯನ್ನು ಹೆಚ್ಚು ಹೆಚ್ಚು ಉತ್ತೇಜಸಬೇಕಿದೆ.

ಈ ಸಂದರ್ಭದಲ್ಲಿ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಮಹಾನಿರ್ದೇಶಕ ಮೇ.ಜ.ಬಾಬರ್ ಇಫ್ತಿಕಾರ್ ಮಾತನಾಡಿ, ಪಾಕಿಸ್ತಾನದ ಗ್ರಹಿಕೆ ಸುಧಾರಿಸಬೇಕಾದ ಸಮಯ ಬಂದಿದೆ ಈ ಚಲನಚಿತ್ರೋತ್ಸವವು ಆ ಪ್ರಯತ್ನದ ಒಂದು ಸಣ್ಣ ಭಾಗವಾಗಿದೆ "ನಿಜವಾದ ಪಾಕಿಸ್ತಾನವನ್ನು ತೋರಿಸುವ ಜವಾಬ್ದಾರಿಯನ್ನು ನಾವು ಯುವಕರಿಗೆ ಏಕೆ ನೀಡಬಾರದು?" ಎಂದು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com