ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ: ಡಬ್ಲ್ಯೂಎಚ್ ಒ

ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಹೊಸ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೊಸ್​ ಅಧಾನೊಮ್​ ಘೆಬ್ರೆಯೆಸಸ್ ಸೋಮವಾರ ಹೇಳಿದ್ದಾರೆ.

Published: 01st March 2021 11:22 PM  |   Last Updated: 02nd March 2021 12:45 PM   |  A+A-


Casual_photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ವಾಷಿಂಗ್ಟನ್: ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಜಾಗತಿಕವಾಗಿ ಹೊಸ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೊಸ್​ ಅಧಾನೊಮ್​ ಘೆಬ್ರೆಯೆಸಸ್ ಸೋಮವಾರ ಹೇಳಿದ್ದಾರೆ.

ಈ ಪ್ರಕರಣಗಳ ಏರಿಕೆ ನಿರಾಸೆ ತಂದಿದೆ. ಆದರೆ, ಆಶ್ಚರ್ಯವಲ್ಲ ಎಂದಿರುವ ಟೆಡ್ರೊಸ್, ಸೋಂಕು ಹರಡದಂತೆ ರೋಗ ಹರಡುವಿಕೆ ವಿರುದ್ಧದ ಕ್ರಮಗಳನ್ನು ಸಡಿಲಗೊಳಿಸದಂತೆ ರಾಷ್ಟ್ರಗಳನ್ನು ಅವರನ್ನು ಒತ್ತಾಯಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದಂತೆ ಅವರು ಸಲಹೆ ನೀಡಿದ್ದಾರೆ.

ಒಂದು ವೇಳೆ ದೇಶಗಳು ಕೇವಲ ಲಸಿಕೆ ಮೇಲೆ ಅವಲಂಬಿಸಿದರೆ ತಪ್ಪು ಮಾಡಿದಂತಾಗುತ್ತದೆ. ಮೂಲಭೂತ ಸಾರ್ವಜನಿಕ ಆರೋಗ್ಯ ಕ್ರಮಗಳು ಸೋಂಕು ನಿರೋಧಕವಾಗಿ ಉಳಿಯಬೇಕು ಎಂದು ಟೆಡ್ರೊಸ್ ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp