ಭ್ರಷ್ಟಾಚಾರ ಪ್ರಕರಣ, ಫ್ರಾನ್ಸ್ ಮಾಜಿ ಅಧ್ಯಕ್ಷ ಸರ್ಕೋಜಿಗೆ ಜೈಲು ಶಿಕ್ಷೆ 

ನ್ಯಾಯಾಧೀಶರಿಗೆ ಲಂಚ ನೀಡಿಕೆ, ಕಾನೂನಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣದಲ್ಲಿ  ಫ್ರಾನ್ಸ್ನ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ,  ಅವರಿಗೆ ಮೂರು   ವರ್ಷ ಜೈಲು ಶಿಕ್ಷೆ ವಿಧಿಸಿದೆ. 

Published: 01st March 2021 10:46 PM  |   Last Updated: 02nd March 2021 12:47 PM   |  A+A-


Frances_ex-president_Sarkozy1

ಫ್ರಾನ್ಸ್ ಮಾಜಿ ಅಧ್ಯಕ್ಷ ಸರ್ಕೋಜಿ

Posted By : Nagaraja AB
Source : UNI

ಪ್ಯಾರಿಸ್: ನ್ಯಾಯಾಧೀಶರಿಗೆ ಲಂಚ ನೀಡಿಕೆ, ಕಾನೂನಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣದಲ್ಲಿ  ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ,  ಅವರಿಗೆ ಮೂರು   ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಮೂರು ವರ್ಷ ಶಿಕ್ಷೆ ವಿಧಿಸಿದ್ದರೂ ಅದರಲ್ಲಿ ಎರಡು ವರ್ಷದ ಶಿಕ್ಷೆ ಅಮಾನತು ಮಾಡಲಾಗಿದೆ. ಹೀಗಾಗಿ ಸರ್ಕೋಜಿ ಒಂದು ವರ್ಷದ ಅವಧಿಗೆ  ಮಾತ್ರ ಜೈಲಿಗೆ ಹೋಗಬೇಕಾಗುತ್ತದೆ.

2007 ರಿಂದ 2012ರವರೆಗೆ ಫ್ರಾನ್ಸ್ ಅಧ್ಯಕ್ಷರಾಗಿದ್ದ ನಿಕೋಲಸ್ ಸರ್ಕೋಜಿ ಅವರು ತಾವು ತಪ್ಪು ಎಸಗಿಲ್ಲ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ. ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ತಮ್ಮ ಪ್ರಾಸಿಕ್ಯೂಟರ್ಗಳು ನಡೆಸಿದ ಕುತಂತ್ರ ಇದು ಎಂದು ದೂರಿದ್ದಾರೆ.

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕೋಜಿ ಅವರಿಗೆ ಹತ್ತು ದಿನಗಳ ಅವಕಾಶ ನೀಡಲಾಗಿದೆ. ನೀಡಲಾಗಿದೆ. ಜಾಕ್ವೆಸ್ ಚಿರಾಕ್ ಅವರು ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಫ್ರಾನ್ಸ್ ನಲ್ಲಿ  ಶಿಕ್ಷೆಗೆ  ಒಳಗಾಗುತ್ತಿರುವ ಎರಡನೇ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೂ  ಒಳಗಾಗಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp