ಬೈಡನ್ ಆಡಳಿತ ತಂಡಕ್ಕೆ ಮತ್ತೋರ್ವ ಭಾರತೀಯ-ಅಮೆರಿಕನ್ ಸೇರ್ಪಡೆ 

ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತ ಭವನ ಸೇನಾ ಕಚೇರಿಗೆ ಭಾರತೀಯ ಮೂಲದ ಅಮೆರಿಕನ್ ಮಜು ವರ್ಗೀಸ್ ನ್ನು ನೇಮಕ ಮಾಡಿದ್ದಾರೆ. 

Published: 02nd March 2021 01:30 PM  |   Last Updated: 02nd March 2021 01:30 PM   |  A+A-


Biden appoints Indian-American Director of WH Military Office

ಬೈಡನ್ ಆಡಳಿತ ತಂಡಕ್ಕೆ ಮತ್ತೋರ್ವ ಭಾರತೀಯ-ಅಮೆರಿಕನ್ ಸೇರ್ಪಡೆ

Posted By : Srinivas Rao BV
Source : IANS

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತ ಭವನ ಸೇನಾ ಕಚೇರಿಗೆ ಭಾರತೀಯ ಮೂಲದ ಅಮೆರಿಕನ್ ಮಜು ವರ್ಗೀಸ್ ನ್ನು ನೇಮಕ ಮಾಡಿದ್ದಾರೆ. 

ಈ ಹಿಂದೆ ಜೋ ಬೈಡನ್ ನ ಪ್ರಚಾರ ಸಮಿತಿಯ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿರುವ ಮಜು ವರ್ಗೀಸ್ ಇನ್ನು ಮುಂದೆ ಜೋ ಬೈಡನ್ ಅವರ ಉಪ ಸಹಾಯಕ ಹಾಗೂ ಶ್ವೇತ ಭವನದ ಸೇನಾ ಕಚೇರಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಪ್ರಚಾರದ ಹೊಣೆಯನ್ನು ನಿಭಾಯಿಸಿದ್ದ ಮಜು ವರ್ಗೀಸ್, ಜೋ ಬೈಡನ್ ಪದಗ್ರಹಣ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದರು.  

ಈಗ ಶ್ವೇತ ಭವನದ ಸೇನಾ ನಿರ್ದೇಶಕರಾಗಿ, ಸೇನಾ ಬೆಂಬಲ, ತುರ್ತು ವೈದ್ಯಕೀಯ ಸೇವೆಗಳು ಹಾಗೂ ಅಧ್ಯಕ್ಷರ ಪ್ರಯಾಣ, ಅಧಿಕೃತ ಸಮಾರಂಭಗಳು, ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಮಜು ವರ್ಗೀಸ್ ನೋಡಿಕೊಳ್ಳಲಿದ್ದಾರೆ.

ಎರಡನೇ ಬಾರಿಗೆ ಶ್ವೇತ ಭವನದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಮಜು ವರ್ಗೀಸ್, ಈ ಹಿಂದೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಅವರಿಗೆ ವಿಶೇಷ ಸಹಾಯಕರು ಹಾಗೂ ಅಧ್ಯಕ್ಷರ ದೇಶ-ವಿದೇಶಗಳ ಪ್ರವಾಸಗಳ ಕಾರ್ಯಕ್ರಮಗಳನ್ನು ನಿಭಾಯಿಸುವ ವಿಭಾಗದ ಉಪನಿರ್ದೇಶಕರಾಗಿದ್ದರು. 

2015 ರಲ್ಲಿ ಬರಾಕ್ ಒಬಾಮ ಗಣರಾಜ್ಯೋತ್ಸವ ದಿನಾಚರಣೆಗೆ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಿದ್ದ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದರು ಮಜು ವರ್ಗೀಸ್.

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp