ಕೋವಿಡ್-19 ದೇಶಕ್ಕೆ ಕಾಲಿಟ್ಟು ಒಂದು ವರ್ಷ: 1.9 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ ಅಧ್ಯಕ್ಷ ಜೊ ಬೈಡನ್ 

ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹಬ್ಬಿ ಒಂದು ವರ್ಷವಾಗುತ್ತಿದ್ದು ಈ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ.

Published: 12th March 2021 09:07 AM  |   Last Updated: 12th March 2021 12:45 PM   |  A+A-


President Joe Biden

ಅಧ್ಯಕ್ಷ ಜೊ ಬೈಡನ್

Posted By : Sumana Upadhyaya
Source : AFP

ವಾಷಿಂಗ್ಟನ್: ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹಬ್ಬಿ ಒಂದು ವರ್ಷವಾಗುತ್ತಿದ್ದು ಈ ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಅವರು 1.9 ಟ್ರಿಲಿಯನ್ ಡಾಲರ್ ಗಳ ಆರ್ಥಿಕ ಪ್ರೋತ್ಸಾಹಕ ಮಸೂದೆಗೆ ಸಹಿ ಹಾಕಿದ್ದಾರೆ.

ಅಮೆರಿಕನ್ನರನ್ನು ರಕ್ಷಿಸುವ ರಕ್ಷಣಾ ಯೋಜನೆ ಐತಿಹಾಸಿಕವಾಗಿದ್ದು ಶ್ವೇತಭವನದ ಒವಲ್ ಕಚೇರಿಯಲ್ಲಿ ಆರ್ಥಿಕ ಪ್ರೋತ್ಸಾಹಕಕ್ಕೆ ಸಹಿ ಹಾಕಿದರು.

ಈ ವಾರದ ಆರಂಭದಲ್ಲಿ ಅಮೆರಿಕ ಕಾಂಗ್ರೆಸ್ ಮಸೂದೆಗೆ ಅನುಮೋದನೆ ನೀಡಿತ್ತು. ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ಆರೋಗ್ಯ ಮತ್ತು ಕೋವಿಡ್-19 ಲಸಿಕೆಗೆ ಹಣ ಸಂಗ್ರಹಕ್ಕೆ 1,400 ಡಾಲರ್ ಬಳಕೆಯಾಗಲಿದೆ.

ಕಾಂಗ್ರೆಸ್ ನ ಎಲ್ಲಾ ರಿಪಬ್ಲಿಕನ್ ಸಂಸದರು ಈ ಮಸೂದೆಗೆ ವಿರೋಧ ಹೇಳಿದ್ದರೂ ಕೂಡ ಶೇಕಡಾ 60ರಷ್ಟು ಮಂದಿ ಅನುಮೋದಿಸಿರುವುದರಿಂದ ಅಧ್ಯಕ್ಷರು ಸಹಿ ಹಾಕಿದ್ದು ಇದಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ ಸಹ ಶ್ಲಾಘಿಸಿದೆ.

ಈ ಐತಿಹಾಸಿಕ ಮಸೂದೆಯು ಈ ದೇಶದ ಬೆನ್ನೆಲುಬಾಗಿದ್ದು, ದೇಶವನ್ನು ಪುನರ್ನಿರ್ಮಿಸಲು ಮತ್ತು ಈ ರಾಷ್ಟ್ರದ ದುಡಿಯುವ ಜನರ ವರ್ಗ, ಮಧ್ಯಮ ವರ್ಗದ ಜನರು, ದೇಶವನ್ನು ನಿರ್ಮಿಸಿದವರಿಗೆ ಹೋರಾಟದ ಅವಕಾಶವನ್ನು ನೀಡುತ್ತದೆ ಎಂದು ನಂತರ ಅಧ್ಯಕ್ಷ ಬೈಡನ್ ಹೇಳಿದರು.

Stay up to date on all the latest ಅಂತಾರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp