ಭಾರತದ ಹಿತಾಸಕ್ತಿಗೆ ಧಕ್ಕೆ: ಟಿಬೆಟ್ ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಚೀನಾ ಅನುಮೋದನೆ
ಟಿಬೇಟ್ ಬಳಿ ಬ್ರಹ್ಮಪುತ್ರ ನದಿ ಬಳಿ ಜಲ ವಿದ್ಯುತ್ ಯೋಜನೆಯೂ ಸೇರಿದಂತೆ ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳ ನೀಲನಕ್ಷೆಗಳನ್ನು ಚೀನಾ ಸಂಸತ್ ತನ್ನ 14 ನೇ ಪಂಚ ವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿಕೊಂಡಿದೆ.
Published: 12th March 2021 04:15 PM | Last Updated: 12th March 2021 04:20 PM | A+A A-

ಭಾರತದ ಹಿತಾಸಕ್ತಿಗೆ ಧಕ್ಕೆ: ಟಿಬೆಟ್ ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಚೀನಾ ಅನುಮೋದನೆ
ಬೀಜಿಂಗ್: ಟಿಬೇಟ್ ಬಳಿ ಬ್ರಹ್ಮಪುತ್ರ ನದಿ ಬಳಿ ಜಲ ವಿದ್ಯುತ್ ಯೋಜನೆಯೂ ಸೇರಿದಂತೆ ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳ ನೀಲನಕ್ಷೆಗಳನ್ನು ಚೀನಾ ಸಂಸತ್ ತನ್ನ 14 ನೇ ಪಂಚ ವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿಕೊಂಡಿದೆ.
ಅರುಣಾಚಲ ಪ್ರದೇಶದ ಗಡಿಯ ಬಳಿಯೇ ಜಾರಿಯಾಗುವ ಈ ಜಲ ವಿದ್ಯುತ್ ಯೋಜನೆಯನ್ನು ಚೀನಾ ರೂಪಿಸಿದ್ದು, ಭಾರತ ಹಿಂದಿನಿಂದಲೂ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.
ರಾಷ್ಟ್ರೀಯ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ 14ನೇ ಪಂಚ ವಾರ್ಷಿಕ ಯೋಜನೆ (2021-2025) ನ್ನು ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ ಪಿಸಿ), 2,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲರುವ ಶಾಸಕರು ಸಂಸತ್ ನಲ್ಲಿ ಅಳವಡಿಸಿಕೊಂಡಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್, ಚೀನಾದ ಪ್ರೀಮಿಯರ್ ಲೀ ಕೆಕಿಯಾಂಗ್ ಹಾಗೂ ಇನ್ನಿತರ ನಾಯಕರು ಭಾಗವಹಿಸಿದ್ದ ಈ ಸಭೆಯಲ್ಲಿ, ಚೀನಾದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ನೀಲನಕ್ಷೆಯುಳ್ಳ 60 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಪ್ರಸ್ತಾವನೆಗಳ ಪೈಕಿ ಬ್ರಹ್ಮಪುತ್ರ ನದಿಯ ಕೇಳಭಾಗದ ಹರಿವಿಗೆ ತಡೆಯಾಗಿ ಅಣೆಕಟ್ಟು (ಡ್ಯಾಮ್) ನಿರ್ಮಾಣ ಮಾಡುವ ಪ್ರಸ್ತಾವನೆ ಇದ್ದು ಇದಕ್ಕೆ ಭಾರತ ಹಾಗೂ ಬಾಂಗ್ಲಾದೇಶಗಳ ಆದಿಯಾಗಿ ನದಿ ತೀರದಲ್ಲಿರುವ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಚೀನಾ ಮಾತ್ರ ನದಿ ತೀರದ ರಾಷ್ಟ್ರಗಳ ವಿರೋಧವನ್ನು ಲೆಕ್ಕಿಸದೆ ಮುಂದುವರೆದಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಷ್ಟ್ರಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ಹೇಳುತ್ತಿದೆ.
ಗಡಿ ಭಾಗದ ನದಿ ನೀರಿನ ಬಳಕೆ ಹಕ್ಕುಗಳ ಅಡಿಯಲ್ಲಿ ಭಾರತ ಚೀನಾ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ನದಿ ನೀರು ಹರಿಯುತ್ತಿರುವೆಡೆ ಇರುವ ದೇಶಗಳ ಹಿತಾಸಕ್ತಿಗೆ ಚೀನಾದ ಚಟುವಟಿಕೆಗಳಿಂದ ಧಕ್ಕೆಯಾಗಬಾರದೆಂದು ಎಚ್ಚರಿಸಿತ್ತು.
ಇದರ ಹೊರತಾಗಿಯೂ ಸಹ ಚೀನಾ ಯೋಜನೆಯನ್ನು ಮುಂದುವರೆಸಿದ್ದು, ಈ ವರ್ಷದಿಂದಲೇ ಅಣೆಕಟ್ಟು ನಿರ್ಮಿಸುವ ಕೆಲಸಕ್ಕೆ ಅಧಿಕಾರಿಗಳು ಶ್ರಮಿಸಬೇಕೆಂದು ಎನ್ ಪಿಸಿ ಅಧಿವೇಶನದಲ್ಲಿ ಹೇಳಲಾಗಿದೆ.