ಅಶ್ಲೀಲತೆ ವಿಡಿಯೋ ಆರೋಪ; ಟಿಕ್ ಟಾಕ್ ನಿಷೇಧಿಸಿ ಪೇಶಾವರ ಹೈಕೋರ್ಟ್ ಆದೇಶ
ಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದೆ ಎಂಬ ಆರೋಪದಡಿ ಮನರಂಜನಾ ವೀಡಿಯೊಗಳ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಪೇಶಾವರ ಹೈಕೋರ್ಟ್ (ಪಿಎಚ್ಸಿ) ಗುರುವಾರ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ(ಪಿಟಿಎ) ಆದೇಶಿಸಿದೆ.
Published: 12th March 2021 08:21 PM | Last Updated: 12th March 2021 08:31 PM | A+A A-

ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದೆ ಎಂಬ ಆರೋಪದಡಿ ಮನರಂಜನಾ ವೀಡಿಯೊಗಳ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಪೇಶಾವರ ಹೈಕೋರ್ಟ್(ಪಿಎಚ್ಸಿ) ಗುರುವಾರ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ(ಪಿಟಿಎ) ಆದೇಶಿಸಿದೆ.
ಸೋಷಿಯಲ್ ಮೀಡಿಯಾ ವೇದಿಕೆಯ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ಪಿಎಚ್ ಸಿ ಮುಖ್ಯ ನ್ಯಾಯಮೂರ್ತಿ ಕೈಸರ್ ರಶೀದ್ ಖಾನ್, ಟಿಕ್ ಟಾಕ್ ನಿಷೇಧಿಸುವ ಆದೇಶ ನೀಡಿದ್ದಾರೆ ಎಂದು ‘ಡಾನ್’ ವರದಿ ತಿಳಿಸಿದೆ.
ಟಿಕ್ ಟಾಕ್ನಲ್ಲಿ ಅಪ್ಲೋಡ್ ಆಗುತ್ತಿರುವ ವೀಡಿಯೊಗಳು "ಪಾಕಿಸ್ತಾನಿ ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಮತ್ತು ಟಿಕ್ ಟಾಕ್ ದೇಶದ ಯುವಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪೇಶಾವರದಲ್ಲಿನ ವೇದಿಕೆಯ ಬಗ್ಗೆ ಕೆಟ್ಟ ವರದಿಗಳು ಬರುತ್ತಿರುವುದು ದುಃಖಕರವಾಗಿದೆ" ಎಂದು ಆದೇಶದಲ್ಲಿ ನ್ಯಾಯಮೂರ್ತಿ ಖಾನ್ ತಿಳಿಸಿದ್ದಾರೆ.