ಕ್ವಾಡ್ ಮೂಲಕ ಭಾರತದ ಕೋವಿಡ್-19 ಲಸಿಕೆ ಉತ್ಪಾದನೆ ವಿಸ್ತರಣೆ: 2022`ರೊಳಗೆ ಬಿಲಿಯನ್ ಲಸಿಕೆ ಸೃಷ್ಟಿ ಉದ್ದೇಶ
ಕ್ವಾಡ್ ಒಕ್ಕೂಟದ ಸಭೆಗೂ ಮುನ್ನಾ ಅಮೆರಿಕ, ಇತರ ಸಮಾನ ಮನಸ್ಸಿನ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಕೋವಿಡ್-19 ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಐತಿಹಾಸಿಕ ಒಪ್ಪಂದವೊಂದನ್ನು ಘೋಷಿಸಲು ಸಿದ್ಧತೆ ನಡೆದಿದೆ.
Published: 12th March 2021 07:02 PM | Last Updated: 12th March 2021 07:16 PM | A+A A-

ಕೋವಿಡ್-19 ಲಸಿಕೆ
ವಾಷಿಂಗ್ಟನ್: ಕ್ವಾಡ್ ಒಕ್ಕೂಟದ ಸಭೆಗೂ ಮುನ್ನಾ ಅಮೆರಿಕ, ಇತರ ಸಮಾನ ಮನಸ್ಸಿನ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಕೋವಿಡ್-19 ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಐತಿಹಾಸಿಕ ಒಪ್ಪಂದವೊಂದನ್ನು ಘೋಷಿಸಲು ಸಿದ್ಧತೆ ನಡೆದಿದೆ. ಇದು ಭಾರತದಿಂದ ಉತ್ಪಾದನೆಯಾಗುವ ಕೊರೋನಾವೈರಸ್ ಲಸಿಕೆ ಪೂರೈಕೆಯನ್ನು ವಿಸ್ತರಿಸಲು ಎದುರು ನೋಡುತ್ತಿದೆ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯ ದೇಶಗಳನ್ನೊಳಗೊಂಡ ಇಂಡೋ- ಫೆಸಿಪಿಕ್ ಕ್ವಾಡ್ ನಾಯಕರ 90 ನಿಮಿಷಗಳ ವರ್ಚುಯಲ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ- ಬಿಡೆನ್ ಪಾಲ್ಗೊಳ್ಳಲಿದ್ದಾರೆ.
ಲಸಿಕ ತಯಾರಿಕೆ ಸಾಮರ್ಥ್ಯವನ್ನು ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ವಿಸ್ತರಿಸುವುದು ಮತ್ತು ಈಗಾಗಲೇ ಲಸಿಕೆ ಉತ್ಪಾದಿಸಿ, ಸುರಕ್ಷಿತವಾಗಿ ರಫ್ತು ಮಾಡುತ್ತಿರುವ ಭಾರತದ ಕಂಪನಿಗಳ ಮೇಲೆ ಗಮನ ಕೇಂದ್ರ ಹರಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅಮೆರಿಕ, ಭಾರತ ಮತ್ತು ಜಪಾನ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು 2022 ರ ವೇಳೆಗೆ ಒಂದು ಬಿಲಿಯನ್ ವರೆಗೆ ಲಸಿಕೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಅನುವು ಮಾಡಿಕೊಡಲು ಸಂಕೀರ್ಣ ಹಣಕಾಸು ವಾಹಕವನ್ನು ಒಟ್ಟುಗೂಡಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ಸೃಷ್ಟಿಸಲಾದ ಕೆಲವು ಹೆಚ್ಚುವರಿ ಲಸಿಕೆ ಸಾಮರ್ಥ್ಯವನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿನ ವ್ಯಾಕ್ಸಿನೇಷನ್ ಪ್ರಯತ್ನಗಳಲ್ಲಿ ಬಳಸಲಾಗುತ್ತದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
ಭಾರತದ ಕರೋನವೈರಸ್ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ವಾಡ್ ನಾಯಕರು ಹಣಕಾಸು ಒಪ್ಪಂದಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮೇಡ್-ಇನ್-ಚೀನಾ ಲಸಿಕೆಗಳನ್ನು ನೀಡುವ ಮೂಲಕ ರಾಜತಾಂತ್ರಿಕ ಅಂಕಗಳನ್ನು ಗಳಿಸುವ ಬೀಜಿಂಗ್ ಪ್ರಯತ್ನಗಳಿಗೆ ಕ್ವಾಡ್ ಪ್ರತಿಕ್ರಿಯೆಯನ್ನು ಕೆಲವರು ನೋಡುತ್ತಾರೆ.
ಏತನ್ಮಧ್ಯೆ, ನವದೆಹಲಿ ತನ್ನ ಲಸಿಕೆ ರಾಜತಾಂತ್ರಿಕತೆಯ ಭಾಗವಾಗಿ, 'ಲಸಿಕೆ ಮೈತ್ರಿ' ಉಪಕ್ರಮದ ಮೂಲಕ ಭಾರತೀಯ ನಿರ್ಮಿತ ಕೋವಿಶೀಲ್ಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಒದಗಿಸುತ್ತಿದೆ.
ಭಾರತವು ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಇದು ಜಾಗತಿಕವಾಗಿ 476.26 ಲಕ್ಷ ಡೋಸ್ ಕರೋನವೈರಸ್ ಲಸಿಕೆಯನ್ನು ಪೂರೈಸಿದೆ.