ಅಮೆರಿಕಾದಲ್ಲಿ 3 ಪ್ರತ್ಯೇಕ ಸ್ಪಾಗಳ ಮೇಲೆ ಗುಂಡಿನ ದಾಳಿ: 4 ಮಹಿಳೆಯರು ಸೇರಿ 8 ಮಂದಿ ಸಾವು
ಅಮೆರಿಕದ ಜಾರ್ಜಿಯಾದಲ್ಲಿ 3 ಪ್ರತೇಕ ಸ್ಥಳಗಳಲ್ಲಿ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
Published: 17th March 2021 09:04 AM | Last Updated: 17th March 2021 09:04 AM | A+A A-

ಸಂಗ್ರಹ ಚಿತ್ರ
ಜಾರ್ಜಿಯಾ: ಅಮೆರಿಕದ ಜಾರ್ಜಿಯಾದಲ್ಲಿ 3 ಪ್ರತೇಕ ಸ್ಥಳಗಳಲ್ಲಿ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈಶಾನ್ಯ ಅಟ್ಲಾಂಟಾದ ಎರಡು ಸ್ಪಾಗಳ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ ಮತ್ತು ಚೆರೋಕೀ ಕೌಂಟಿ ಸ್ಪಾದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಚೆರೋಕೀ ಕೌಂಟಿ ಮಸಾಜ್ ಪಾರ್ಲರ್ನಲ್ಲಿ ಗುಂಡಿನ ದಾಳಿ ಮಾಡುತ್ತಿದ್ದ ಶಂಕಿತ ಬಂದೂಕುಧಾರಿ ವುಡ್ಸ್ಟಾಕ್ನ ರಾಬರ್ಟ್ ಆರನ್ ಲಾಂಗ್ (21) ಎಂಬ ಯುವಕ ಬಂಧನಕ್ಕೊಳಗಾಗಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೊಡ್ನಿ ಬ್ರ್ಯಾಂಟ್ ಅವರು, ಈಶಾನ್ಯ ಅಟ್ಲಾಂಟಾ ಸ್ಪಾಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆಂದು ಎಂದು ಸ್ಪಷ್ಟಪಡಿಸಿದ್ದಾರೆ.
ಗೋಲ್ಡ್ ಮಸಾಜ್ ಸ್ಪಾದಲ್ಲಿ ದರೋಡೆ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ದಾರಿ ಮಧ್ಯೆ ಕರೆಯೊಂದು ಬಂದಿತ್ತು. ದಾರಿ ಮಧ್ಯೆ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಕರೆಯಲ್ಲಿ ಹೇಳಿಲಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಕ್ತಿ ಮೃತಪಟ್ಟಿದ್ದ ಎಂದು ಬ್ರ್ಯಾಂಟ್ ತಿಳಿಸಿದ್ದಾರೆ.
ಗೋಲ್ಡ್ ಸ್ಪಾದಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಪೀಡ್ಮಾಂಟ್ ರಸ್ತೆಯ 19 ಬ್ಲಾಕ್ನಲ್ಲಿರುವ ಅರೋಮಾಥೆರಪಿ ಸ್ಪಾದ ನಡು ಬೀದಿಯಲ್ಲಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.