ಕೊರೋನಾ ವೈರಸ್ ವಿರುದ್ಧ ಪ್ರತಿಕಾಯಗಳಿರುವ ಶಿಶುವಿಗೆ ಜನ್ಮ ನೀಡಿದ ಮಹಿಳೆ!

ಮಹಿಳೆಯೊಬ್ಬರು ಗರ್ಭಾವಸ್ಥೆಯಲ್ಲಿದ್ದಾಗಲೇ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದು ಅವರೀಗ ಕೊರೋನಾವೈರಸ್ ಗೆ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕಾದ ವೈದ್ಯರು ಹೇಳಿದ್ದಾರೆ. 

Published: 18th March 2021 01:41 PM  |   Last Updated: 18th March 2021 01:56 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ನ್ಯೂಯಾರ್ಕ್: ಮಹಿಳೆಯೊಬ್ಬರು ಗರ್ಭಾವಸ್ಥೆಯಲ್ಲಿದ್ದಾಗಲೇ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದು ಅವರೀಗ ಕೊರೋನಾವೈರಸ್ ಗೆ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕಾದ ವೈದ್ಯರು ಹೇಳಿದ್ದಾರೆ. 

ಪ್ರಿ- ಪ್ರಿಂಟ್ ಸರ್ವರ್ medRxiv ನಲ್ಲಿ ಪೋಸ್ಟ್ ಮಾಡಲಾಗಿರುವ ಪೀರ್-ರಿವ್ಯೂಡ್ ಅಧ್ಯಯನದ ( peer-reviewed study,) ಪ್ರಕಾರ, ತಾಯಿಯು Moderna mRNA ಲಸಿಕೆಯ ಒಂದು ಡೋಸ್ ಅನ್ನು 36 ವಾರಗಳ ಗರ್ಭಿಣಿಯಾಗಿದ್ದಾಗ ಪಡೆದಿದ್ದಳು.

ಲಸಿಕೆ ಪಡೆದ ಮೂರು ವಾರಗಳ ನಂತರ, ಅವಳು ಆರೋಗ್ಯವಂತ ಹಾಗೂ ಸಂಪೂರ್ಣ ಗರ್ಭಾವಸ್ಥೆ ಮುಗಿದ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾಳೆ.ಜನನದ ನಂತರ ತೆಗೆದ ರಕ್ತದ ಮಾದರಿಯು SARS-CoV-2 ವೈರಸ್ ವಿರುದ್ಧ ಪ್ರತಿಕಾಯಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿತು ಎಂದು ಅಧ್ಯಯನವು ತಿಳಿಸಿದೆ "ಇಲ್ಲಿ, ತಾಯಿಯ ವ್ಯಾಕ್ಸಿನೇಷನ್ ನಂತರ ಕರುಳ ಬಳ್ಳಿಯ ರಕ್ತದಲ್ಲಿ ಪತ್ತೆಹಚ್ಚಬಹುದಾದ SARS-CoV-2 IgG ಪ್ರತಿಕಾಯಗಳೊಂದಿಗಿನ ಶಿಶುವಿನ ಮೊದಲ ಪ್ರಕರಣವನ್ನು ನಾವು ವರದಿ ಮಾಡುತ್ತೇವೆ" ಎಂದು ಸಹ ಲೇಖಕರಾದ ಯುಎಸ್ ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದ ಪಾಲ್ ಗಿಲ್ಬರ್ಟ್ ಮತ್ತು ಚಾಡ್ ರುಡ್ನಿಕ್ ಹೇಳಿದ್ದಾರೆ.

ಮಗುವಿಗೆ ಪ್ರತ್ಯೇಕವಾಗಿ ಹಾಲುಣಿಸುವ ಮಹಿಳೆ, ಸಾಮಾನ್ಯ 28 ದಿನಗಳ ವ್ಯಾಕ್ಸಿನೇಷನ್ ಪ್ರೋಟೋಕಾಲ್ ಟೈಮ್ ಲೈನ್ ಪ್ರಕಾರ ಲಸಿಕೆಯ ಎರಡನೇ ಪ್ರಮಾಣವನ್ನು ಪಡೆದುಕೊಂಡಳೆಂದು ವೈದ್ಯರು ಹೇಳಿದ್ದಾರೆ  ಪ್ರಸ್ತುತ ಸಂಶೋಧನೆಯು "ತಾಯಿಯ ವ್ಯಾಕ್ಸಿನೇಷನ್‌ನೊಂದಿಗೆ SARS-CoV-2 ನಿಂದ ರಕ್ಷಣೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು" ಸೂಚಿಸುತ್ತದೆ. ಆದಾಗ್ಯೂ, ಲಸಿಕೆ ಹಾಕಿದ ತಾಯಂದಿರಿಗೆ ಜನಿಸಿದ ಶಿಶುಗಳಲ್ಲಿನ ಪ್ರತಿಕಾಯದ ಪ್ರತಿಕ್ರಿಯೆಯನ್ನು ಪ್ರಮಾಣೀಕರಿಸಲು ಹೆಚ್ಚಿನ ದೀರ್ಘಕಾಲೀನ ಅಧ್ಯಯನಗಳು ಅಗತ್ಯವೆಂದು ಗಿಲ್ಬರ್ಟ್ ಮತ್ತು ಚಾಡ್ ರುಡ್ನಿಕ್ ಹೇಳಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp