ಮೋದಿಯ ಒಂದೇ ಕರೆಗೆ 400 ಟನ್ ಕಾಶ್ಮೀರಿ ಸೇಬು ಯುಎಇಗೆ ರಫ್ತು!

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಓಗೊಟ್ಟು, ಲುಲು ಗ್ರೂಪ್ ನ ಮಾಲಿಕ, ಕೇರಳ ಮೂಲದ ಉದ್ಯಮಿ 400 ಟನ್ ಕಾಶ್ಮೀರಿ ಸೇಬನ್ನು ಮಧ್ಯಪ್ರಾಚ್ಯಕ್ಕೆ ಆಮದು ಮಾಡಿಕೊಂಡಿದ್ದಾರೆ. 

Published: 23rd March 2021 01:25 PM  |   Last Updated: 23rd March 2021 01:25 PM   |  A+A-


Heeding Modi's call, Lulu imports 400 tons of Kashmiri apples into UAE

ಮೋದಿಯ ಒಂದೇ ಕರೆಗೆ 400 ಟನ್ ಕಾಶ್ಮೀರಿ ಸೇಬು ಯುಎಇಗೆ ರಫ್ತು!

Posted By : Srinivas Rao BV
Source : IANS

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಓಗೊಟ್ಟು, ಲುಲು ಗ್ರೂಪ್ ನ ಮಾಲಿಕ, ಕೇರಳ ಮೂಲದ ಉದ್ಯಮಿ 400 ಟನ್ ಕಾಶ್ಮೀರಿ ಸೇಬನ್ನು ಮಧ್ಯಪ್ರಾಚ್ಯಕ್ಕೆ ಆಮದು ಮಾಡಿಕೊಂಡಿದ್ದಾರೆ. 

ಕಾಶ್ಮೀರದ ಸೇಬು ಬೆಳೆಯುವ ರೈತರಿಗೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. 

ಈ ಬಗ್ಗೆ ಐಎಎನ್ಎಸ್ ಜೊತೆ ಮಾತನಾಡಿರುವ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ, ಸರ್ಕಾರದ ನೀತಿಗಳನ್ನು ಒಪ್ಪಿ ಅದಕ್ಕೆ ತಕ್ಕಂತೆ ಕೆಲಸ ಮಾಡುವುದು ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ್ದ ವೇಳೆ ಕಾಶ್ಮೀರದಲ್ಲಿ ಹೂಡಿಕೆ ಹಾಗೂ ಬೆಂಬಲಿಸುವ ಯೋಜನೆಯನ್ನು ಮುಂದಿಟ್ಟಿದ್ದರು. ಈ ಯೋಜನೆಗೆ ಸ್ಪಂದಿಸಿದ ಮೊದಲ ವ್ಯಕ್ತಿ ನಾನಾಗಿದ್ದು, 400 ಟನ್ ಗಳಷ್ಟು ಕಾಶ್ಮೀರಿ ಸೇಬನ್ನು ಕಳೆದ ವರ್ಷ ಮಧ್ಯಪ್ರಾಚ್ಯಕ್ಕೆ ಆಮದು ಮಾಡಿಸಿದ್ದೆ. ಈಗ ಅದು ಮುಂದುವರೆದಿದೆ, ಆದರೆ ಕೋವಿಡ್-19 ಕಾರಣದಿಂದಾಗಿ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಈ ವರ್ಷ ಸೇಬು ಆಮದಾಗಿದೆ ಎಂದು ಹೇಳಿದ್ದಾರೆ.

ಯೂಸುಫ್ ಅಲಿ 30,000 ಮಂದಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲೂ ಶೇ.60 ರಷ್ಟು ಕೇರಳಿಗರಾಗಿದ್ದಾರೆ. 1973 ರಲ್ಲಿ ಮಧ್ಯಪ್ರಾಚ್ಯ ಸೇರಿದ ಯೂಸೂಫ್ ಅಲಿ ಈಗ ದೊಡ್ಡ ಉದ್ಯಮಿಯಾಗಿ ಹೆಸರು ಗಳಿಸಿದ್ದಾರೆ. 


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp