ಮೊದಲ ಟ್ವೀಟ್ ನ ಡಿಜಿಟಲ್ ಆವೃತ್ತಿಯನ್ನು 2.9 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಿದ ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ

ಸೋಷಿಯಲ್ ಮೀಡಿಯಾ ಸಂಸ್ಥೆ ಟ್ವಿಟರ್ ನ ಮುಖ್ಯ ಕಾರ್ಯ ನಿರ್ವಾಹಕ ಜ್ಯಾಕ್ ಡಾರ್ಸೆ ಅವರು ತಮ್ಮ ಮೊದಲ ಟ್ವೀಟ್‌ನ ಡಿಜಿಟಲ್ ಆವೃತ್ತಿಯ ಹರಾಜನ್ನು ಘೋಷಿಸಿದ ಎರಡು ವಾರಗಳ ನಂತರ 2.9 ಮಿಲಿಯನ್‌ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.

Published: 23rd March 2021 12:42 PM  |   Last Updated: 23rd March 2021 12:42 PM   |  A+A-


Twitter CEO Jack Dorsey

ಟ್ವಿಟ್ಟರ್ ಸಿಇಒ ಜ್ಯಾಕ್ ಡಾರ್ಸೆ

Posted By : Sumana Upadhyaya
Source : Associated Press

ಸಾನ್ ಫ್ರಾನ್ಸಿಸ್ಕೊ: ಸೋಷಿಯಲ್ ಮೀಡಿಯಾ ಸಂಸ್ಥೆ ಟ್ವಿಟರ್ ನ ಮುಖ್ಯ ಕಾರ್ಯ ನಿರ್ವಾಹಕ ಜ್ಯಾಕ್ ಡಾರ್ಸೆ ಅವರು ತಮ್ಮ ಮೊದಲ ಟ್ವೀಟ್‌ನ ಡಿಜಿಟಲ್ ಆವೃತ್ತಿಯ ಹರಾಜನ್ನು ಘೋಷಿಸಿದ ಎರಡು ವಾರಗಳ ನಂತರ 2.9 ಮಿಲಿಯನ್‌ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.

2006ನೇ ಇಸವಿ ಮಾರ್ಚ್ ತಿಂಗಳಲ್ಲಿ ಜ್ಯಾಕ್ ಡಾರ್ಸೆ ಮೊದಲ ಟ್ವೀಟ್ ಮಾಡಿ ಟ್ವಿಟ್ಟರ್ ಗೆ ಈಗಷ್ಟೇ ಕಾಲಿಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಅದರ ಡಿಜಿಟಲ್ ಆವೃತ್ತಿಯನ್ನು ಸಿನಾ ಎಸ್ಟವಿ ಕಂಪೆನಿಯ ಸಿಇಒ ಬ್ರಿಡ್ಜ್ ಒರಾಕಲ್ ಖರೀದಿಸಿದ್ದಾರೆ.

15 ವರ್ಷ ಹಳೆಯ ಪೋಸ್ಟ್ ನ್ನು ಶಿಲೀಂಧ್ರವಲ್ಲದ ಟೋಕನ್ ಅಥವಾ ಎನ್‌ಎಫ್‌ಟಿ ಎಂದು ಮಾರಾಟ ಮಾಡಲಾಗಿದೆ ಇದು ನೈಜವಾದ ಟ್ವೀಟ್ ಎಂದು ಪ್ರಮಾಣೀಕರಿಸುವ ಡಿಜಿಟಲ್ ಪ್ರಮಾಣಪತ್ರ ಮತ್ತು ಬ್ಲಾಕ್‌ಚೈನ್ ಡಿಜಿಟಲ್ ಲೆಡ್ಜರ್‌ನಲ್ಲಿ ವಿವರಗಳನ್ನು ದಾಖಲಿಸಲಾಗಿದೆ.

ಹರಾಜಿನಲ್ಲಿ ಸಿಕ್ಕಿದ ಹಣವನ್ನು ಲಾಭೇತರ ಸಂಘಟನೆ ಗಿವ್ ಡೈರೆಕ್ಟ್ಲಿಗೆ ನೀಡಲಾಗಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಆರ್ಥಿಕವಾಗಿ ದುಸ್ಥಿತಿಗೆ ಹೋಗಿರುವ ಆಫ್ರಿಕಾದ ಕುಟುಂಬಗಳಿಗೆ ನೆರವು ನೀಡಲು ಹಣವನ್ನು ಬಳಸಲಾಗುತ್ತದೆ ಎಂದು ಡಿಜಿಟಲ್ ಹರಾಜು ನಡೆದ ವೇದಿಕೆಯಾದ ವ್ಯಾಲ್ಯುಯೇಬಲ್ಸ್ ಬೈ ಸೆಂಟ್ ತಿಳಿಸಿದೆ.


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp