ಸಾರಿಗೆ ಸಂಪರ್ಕ, ವಾಣಿಜ್ಯಾಭಿವೃದ್ಧಿಗೆ ಪ್ರಧಾನಿ ಮೋದಿ-ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಒತ್ತು!

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ನಡುವಿನ ಶೃಂಗಸಭೆಯಲ್ಲಿ ಸಾರಿಗೆ ಸಂಪರ್ಕ, ವಾಣಿಜ್ಯಾಭಿವೃದ್ಧಿ ಮತ್ತು ನೀರಿನ ನಿರ್ವಹಣೆ ಕುರಿತಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

Published: 24th March 2021 10:20 PM  |   Last Updated: 24th March 2021 10:21 PM   |  A+A-


hasina-modi

ಶೇಖ್ ಹಸೀನಾ - ನರೇಂದ್ರ ಮೋದಿ

Posted By : Srinivasamurthy VN
Source : PTI

ಢಾಕಾ:  ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ನಡುವಿನ ಶೃಂಗಸಭೆಯಲ್ಲಿ ಸಾರಿಗೆ ಸಂಪರ್ಕ, ವಾಣಿಜ್ಯಾಭಿವೃದ್ಧಿ ಮತ್ತು ನೀರಿನ ನಿರ್ವಹಣೆ ಕುರಿತಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಇದೇ ಮಾರ್ಚ್ 26 ಮತ್ತು 27ರಂದು ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಬಾಂಗ್ಲಾದೇಶ ವಿಮೋಚನಾ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಾರಕ ಕೊರೋನಾ ಸಾಂಕ್ರಾಮಿಕ ಹರಡಿದ ಬಳಿಕ ಇದು ಪ್ರಧಾನಿ ನರೇಂದ್ರ ಮೋದಿ ಮೊಟ್ಟ ಮೊದಲ ವಿದೇಶಿ ಪ್ರವಾಸವಾಗಿದೆ. 2 ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಉಭಯ ನಾಯಕರು ಹಲವು ಒಪ್ಪಂಗಳನ್ನು ಮಾಡಿಕೊಳ್ಳಲ್ಲಿದ್ದು. ಈ ಸಭೆಯಲ್ಲಿ ಪ್ರಮುಖವಾಗಿ ಉಭಯನಾಯಕರು ಸಾರಿಗೆ ಸಂಪರ್ಕ, ವಾಣಿಜ್ಯಾಭಿವೃದ್ಧಿ ಮತ್ತು ನೀರಿನ ನಿರ್ವಹಣೆ ಕುರಿತಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಈ  ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಮೂಲಗಳು, 'ಬಾಂಗ್ಲಾದೇಶ ಸಂಪರ್ಕ, ವ್ಯಾಪಾರ ಮತ್ತು ವಾಣಿಜ್ಯ ಸಂಬಂಧ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಿದೆ. ಭಾರತದೊಂದಿಗಿನ ಸಂಬಂಧ ಸುಧಾರಣೆ ಮತ್ತು ವಾಣಿಜ್ಯಾಭಿವೃದ್ಧಿ ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ ರಾಷ್ಟ್ರೀಯ ಭದ್ರತೆ, ಗಡಿ ನಿರ್ವಹಣೆ ವಿಚಾರಗಳು ಕೂಡ ಚರ್ಚೆಗೆ ಬರಲಿವೆ. 

ಇದೇ ವಿಚಾರವಾಗಿ ಮಾತನಾಡಿರುವ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೋಮನ್ ಅವರು, 'ಭಾರತದ ಪ್ರಧಾನಿ ಢಾಕಾಗೆ ಬರುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ. ಮಾರ್ಚ್ 26 ರಂದು ನಡೆಯಲಿರುವ ಬಾಂಗ್ಲಾದೇಶದ  ಸ್ವಾತಂತ್ರ್ಯ ಸ್ವರ್ಣ ಮಹೋತ್ಸವ  ಮತ್ತು ಬಂಗ್ ಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದೇ  ವೇಳೆ,  ಸತ್ಖಿರಾ ಮತ್ತು ಗೋಪಾಲ್‌ಗಂಜ್‌ನ  ಓರ್ಕಾಂಡಿಯಲ್ಲಿರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ ಬಂಗ್ ಬಂಧು ಶೇಖ್ ಮುಜಿಬುರ್ ರಹಮಾನ್ ಅವರ  ಸಮಾಧಿ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಅಂತೆಯೇ ಉಭಯ ನಾಯಕರ ಭೇಟಿ ವೇಳೆ ನೆರೆಯ ದೇಶಗಳಾದ ನೇಪಾಳ ಮತ್ತು ಭೂತಾನ್ ಅನ್ನು ಸಂಪರ್ಕದಲ್ಲಿ ಸೇರಿಸಲು ಭಾರತ ಪ್ರಸ್ತಾವಿಸುವ ಸಾಧ್ಯತೆ ಇದೆ. ಇದರಿಂದಾಗಿ ಆ ದೇಶಗಳಿಂದ ಜನರು ಮತ್ತು ಸರಕು ಸಾಗಣೆಯು ಸಹ ಸೌಲಭ್ಯವನ್ನು ಆನಂದಿಸಬಹುದು ಎನ್ನಲಾಗಿದೆ.  ಚೀನಾಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಂಗಾಳಕೊಲ್ಲಿಯನ್ನು ಕೇಂದ್ರೀಕರಿಸುವ ಸಂಪರ್ಕಕ್ಕೆ ಭಾರತ ಒತ್ತು ನೀಡುತ್ತದೆ ಎಂದು ಹೇಳಲಾಗಿದೆ. 

ಇದಕ್ಕೆ ಇಂಬು ನೀಡುವಂತೆ ಈ ತಿಂಗಳ ಆರಂಭದಲ್ಲಿ ಢಾಕಾಗೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು,  ಈ ಪ್ರದೇಶದ ಭೌಗೋಳಿಕ-ಆರ್ಥಿಕ ಸನ್ನಿವೇಶವನ್ನು ಬದಲಿಸಲು ಮುಂದಿನ 20 ವರ್ಷಗಳವರೆಗೆ ಬಾಂಗ್ಲಾದೇಶ ಮತ್ತು ಅದಕ್ಕೂ ಮೀರಿದ ಸಂಪರ್ಕದ ಅಭಿವೃದ್ಧಿಯತ್ತ ಗಮನ ಹರಿಸಲು ಭಾರತ ಉತ್ಸುಕವಾಗಿದೆ ಎಂದು ಹೇಳಿದ್ದರು. 

"ಐವತ್ತು ವರ್ಷಗಳು (ಭಾರತೀಯ-ಬಾಂಗ್ಲಾದೇಶ ಸಂಬಂಧಗಳು) ಮುಗಿದಿವೆ. ಮುಂದಿನ 20 ವರ್ಷಗಳವರೆಗೆ ಯೋಚಿಸೋಣ. ಎಲ್ಲಕ್ಕಿಂತ ಹೆಚ್ಚಾಗಿ ಸಂಪರ್ಕವನ್ನು ಅಭವೃದ್ಧಿಯತ್ತ ಗಮನ ಹರಿಸೋಣ... ನಾನು ಸಂಪರ್ಕವನ್ನು ದೊಡ್ಡ ಗುರಿಯಾಗಿ ಆರಿಸಿಕೊಳ್ಳುತ್ತೇನೆ (ನಮ್ಮ ಸಂಬಂಧಕ್ಕಾಗಿ)" ಎಂದು ಜೈ ಶಂಕರ್ ಹೇಳಿದ್ದರು. 

ಢಾಕಾ ಮತ್ತು ದೆಹಲಿ ಎರಡೂ ಟೋಕಿಯೊದೊಂದಿಗೆ "ಉತ್ತಮ" ಸಂಬಂಧವನ್ನು ಹೊಂದಿದ್ದರಿಂದ ಸಂಪರ್ಕದ ವಿಷಯದಲ್ಲಿ ದ್ವಿಪಕ್ಷೀಯ ನಿರ್ಣಯಗಳ ಪ್ರಮುಖ ಪಾಲುದಾರರಾಗಿ ಜಪಾನ್ ಅನ್ನು ಭಾರತ ಪರಿಗಣಿಸಿದೆ. ಇದೇ ವಿಚಾರವಾಗಿ ಮಾತನಾಡಿದ್ದ ಜೈಶಂಕರ್, ' ಬಂಗಾಳಕೊಲ್ಲಿಯಲ್ಲಿ (ಪ್ರದೇಶ) ಸಂಪರ್ಕ ಯೋಜನೆಗಳಲ್ಲಿ ಜಪಾನ್ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇದರಿಂದ ಈ ಪ್ರದೇಶದ ಸಂಪೂರ್ಣ ಭೌಗೋಳಿಕ ಅರ್ಥಶಾಸ್ತ್ರವು ಬದಲಾಗುತ್ತದೆ, ಬಂಗಾಳಕೊಲ್ಲಿಯು ತುಂಬಾ ವಿಭಿನ್ನವಾಗಿ ಕಾಣುತ್ತದೆ ಎಂದು ನಾನು ನಿಮಗೆ ಹೇಳಬಲ್ಲೆ.

ತ್ರಿಪುರ ಮತ್ತು ಬಾಂಗ್ಲಾದೇಶದ ಭಾರತದ ಗಡಿಯ ನಡುವೆ ಹರಿಯುವ ಫೇಣಿ ನದಿಯ ಮೇಲೆ ನಿರ್ಮಿಸಲಾದ ಸೇತುವೆಯನ್ನು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಮತ್ತು ಪ್ರಧಾನಿ ಹಸೀನಾ ಉದ್ಘಾಟಿಸಿದರು. ಸೇತುವೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ್ದ ಪ್ರಧಾನಿ ಮೋದಿ, ಉತ್ತಮ ಸಂಪರ್ಕವು ಉಭಯ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸುವುದಲ್ಲದೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳಿಗೆ ಬಲವಾದ ಕೊಂಡಿಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದರು. 
 


Stay up to date on all the latest ಅಂತಾರಾಷ್ಟ್ರೀಯ news
Poll
Amarinder-Sidhu

ನವಜೋತ್ ಸಿಂಗ್ ಸಿಧುಗೆ ಅಮರೀಂದರ್ ಅವರ ಪ್ರಬಲ ವಿರೋಧವು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಾನಿ ಮಾಡುತ್ತದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp