ಸಮುದ್ರದಲ್ಲಿ ಟ್ರಾಫಿಕ್ ಜಾಮ್; ಸಾಲುಗಟ್ಟಿ ನಿಂತ ಸರಕು ಸಾಗಾಣಿಕಾ ಹಡಗುಗಳು, 73000 ಕೋಟಿ ನಷ್ಟ

ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ.. ಆದರೆ ಸಮುದ್ರ ಮಾರ್ಗದಲ್ಲೂ ಸಾವಿರಾರು ಕಿಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿ ಬರೊಬ್ಬರಿ 73000 ಕೋಟಿ ರೂ ನಷ್ಟವಾಗಿದೆ..

Published: 28th March 2021 01:06 PM  |   Last Updated: 28th March 2021 01:12 PM   |  A+A-


Suez Canal

ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್

Posted By : Srinivasamurthy VN
Source : Associated Press

ಸೂಯೆಜ್: ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ.. ಆದರೆ ಸಮುದ್ರ ಮಾರ್ಗದಲ್ಲೂ ಸಾವಿರಾರು ಕಿಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿ ಬರೊಬ್ಬರಿ 73000 ಕೋಟಿ ರೂ ನಷ್ಟವಾಗಿದೆ..

ಹೌದು..ಸೂಯೆಜ್‌ ಕಾಲುವೆಯಲ್ಲಿ ಬೃಹತ್‌ ಸರಕು ಸಾಗಣೆ ಹಡುಗು ಸಿಕ್ಕಿಹಾಕಿಕೊಂಡು ಸಾವಿರಾರು ಕಿಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮ ಮೆಡಿಟರೇನಿಯನ್‌ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ನೂರಾರು ಸರಕು ಸಾಗಣೆ ಹಡಗುಗಳು ಸಾಲುಗಟ್ಟಿನಿಂತಿವೆ. ಕಳೆದ ಮಂಗಳವಾರ  ಚಂಡಮಾರುತಕ್ಕೆ ಸಿಲುಕಿ 'ಎವರ್‌ ಗೀವನ್‌' ಹಡಗು ಸೂಯೆಜ್‌ ಕಾಲುವೆ ಹೂಳಿನಲ್ಲಿ ಸಿಕ್ಕಿಕೊಂಡು ಅಡ್ಡಲಾಗಿ ನಿಂತುಕೊಂಡಿತು. 5 ದಿನಗಳು ಕಳೆದರೂ ಆ ಹಡಗನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. 

ಹೀಗಾಗಿ ಇದೀಗ ಈ ಮಾರ್ಗಗದಲ್ಲಿ ಚಲಿಸಬೇಕಿದ್ದ ಹಡಗಗಳು ಚಲಿಸಲಾಗದೇ ಅವುಗಳೆಲ್ಲಿವೆಯೋ ಅಲ್ಲಿಯೇ ಇವೆ. ನಿಂತ ಜಾಗದಲ್ಲೇ ಲಂಗರು ಹಾಕಿ ಟ್ರಾಫಿಕ್ ಜಾಮ್ ತೆರವಿಗಾಗಿ ಕಾಯುತ್ತಾ ನಿಂತಿವೆ. 

ಇನ್ನು  'ಎವರ್‌ ಗೀವನ್‌' ಹಡಗು ತೆರವಿಗಾಗಿ ಕಳೆದ ಐದು ದಿನಗಳಿಂದ ಹರಸಾಹಸ ಪಡಲಾಗುತ್ತಿದ್ದು, ಹಡಗಿನ ತೆರವು ಕಾರ್ಯಾಚರಣೆಗೆ ಬೋಸ್ಕಲಿಸ್‌ ಕಂಪನಿಯ ನೆರವನ್ನು ಪಡೆದುಕೊಳ್ಳಲಾಗಿದೆ. ಭಾರವಾದ ಟಗ್‌ಬೋಟ್‌ಗಳು, ಹೂಳೆತ್ತುವಿಕೆ ಮತ್ತು ಸಮುದ್ರದ ಉಬ್ಬರವನ್ನು ಬಳಸಿಕೊಂಡು ಹಡಗನ್ನು ನೀರಿಗೆ  ತಳ್ಳುವ ಯತ್ನ ಮಾಡಲಾಗುತ್ತಿದ್ದು, ಇನ್ನು ಎರಡು ಮೂರು ದಿನಗಳಲ್ಲೇ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಒಂದು ವೇಳೆ ಇದರಿಂದಲೂ ಹಡಗನ್ನು ತೆರವುಗೊಳಿಸಲು ಸಾಧ್ಯವಾಗದೇ ಇದ್ದರೆ, ಹಡಗಿನಲ್ಲಿ ತುಂಬಲಾಗಿರುವ ಸಾವಿರಾರು ಕಂಟೇನರ್‌ಗಳನ್ನು ಕೆಳಗೆ ಇಳಿಸಿ ಹಡಗನ್ನು ನೀರಿಗೆ ತಳ್ಳಲು  ಯೋಜಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದರಿಂದ 73000 ಕೋಟಿ ನಷ್ಟ
ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸರಕು ಸಾಗಾಣಿಕಾ ಹಡಗುಗಳು ನಿಂತ ಪರಿಣಾಮ 300ಕ್ಕೂ ಅಧಿಕ ಹಡಗಗಳು ಸಮಯಕ್ಕೆ ಸರಿಯಾಗಿ ಗುರಿತಲುಪಲಾಗದೇ ತಾವಿರುವ ಜಾಗದಲ್ಲೇ ಲಂಗರು ಹಾಕಿವೆ. ಪರಿಣಾಮ ಇದರಿಂದ ಸರಕು ಸಾಗಾಣಿಕಾ ಉಧ್ಯಮಕ್ಕೆ ಬರೊಬ್ಬರಿ 73000 ಕೋಟಿ  ನಷ್ಟವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ,. 


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp