ಉದ್ದೇಶಪೂರ್ವಕವಾಗಿ ಕೆಮ್ಮು, ಪೊಲೀಸ್ ಅಧಿಕಾರಿಗೆ ನಿಂದನೆ: ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆ 

ಪೊಲೀಸ್ ಅಧಿಕಾರಿ ಬಳಿ ದುರ್ವರ್ತನೆ ತೋರಿದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರ್ ನಲ್ಲಿ 14 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

Published: 29th March 2021 11:21 PM  |   Last Updated: 29th March 2021 11:21 PM   |  A+A-


Indian-origin Singaporean gets 14 weeks in jail for deliberately coughing at and abusing policemen

ಉದ್ದೇಶಪೂರ್ವಕವಾಗಿ ಕೆಮ್ಮು, ಪೊಲೀಸ್ ಅಧಿಕಾರಿಗೆ ನಿಂದನೆ: ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆ

Posted By : Srinivas Rao BV
Source : The New Indian Express

ಸಿಂಗಾಪುರ: ಪೊಲೀಸ್ ಅಧಿಕಾರಿ ಬಳಿ ದುರ್ವರ್ತನೆ ತೋರಿದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರ್ ನಲ್ಲಿ 14 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ಕಳೆದ ವರ್ಷ ದೇವರಾಜ್ ತಮಿಳ್ ಸೆಲ್ವಂ ಎಂಬ ವ್ಯಕ್ತಿ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿಗೆ ನಿಂದಿಸಿದ್ದು, ಉದ್ದೇಶಪೂರ್ವಕವಾಗಿ ಕೆಮ್ಮಿದ್ದರು. ಅಷ್ಟೇ ಅಲ್ಲದೇ ಈತನ ವಿರುದ್ಧ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡದ್ದು, ಈತನಿಗೆ ಡ್ರೈವಿಂಗ್ ನಿಷೇಧವಿದ್ದರೂ ದ್ವಿಚಕ್ರವಾಹನವನ್ನು ಚಾಲನೆ ಮಾಡಿದ್ದು, ಸಾರ್ವಜನಿಕ ಸೇವೆಯಲ್ಲಿರುವವರಿಗೆ ನಿಂದಿಸಿದ್ದು ಸೇರಿದಂತೆ 10 ಆರೋಪಗಳಿದ್ದವು. ಜಿಲ್ಲಾ ನ್ಯಾಯಾಧೀಶರಾದ ಚೆಂಗ್ ಥೈಮ್ ಈ ಆರೋಪಗಳನ್ನು ಪರಿಗಣಿಸಿ 14 ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ. 

ಕಳೆದ ವರ್ಷ ಸೆ.13 ರಂದು ಸಿಂಗಾಪುರದಲ್ಲಿದ್ದ ಮಹಿಳೆಯೊಬ್ಬರು ತನ್ನ ಸಂಬಂಧಿಕರ ಗೆಳೆಯ ಹಿಂಸಾಚಾರದಿಂದ ತಮ್ಮ ಮನೆಯಲ್ಲಿಯೇ ಇದ್ದಾನೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರ ಎದುರೇ ದೇವರಾಜ್ ತನ್ನ ಗೆಳತಿಯನ್ನು ಥಳಿಸಿದ್ದಾನೆ. ಈ ಬೆನ್ನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದರು. 

ಪೊಲೀಸ್ ವಾಹನದಲ್ಲಿ ಆತನನ್ನು ಕರೆದೊಯ್ಯುತ್ತಿರಬೇಕಾದರೆ ತನಗೆ ಉಸಿರಾಡಲು ಆಗುತ್ತಿಲ್ಲ ಎಂದಿದ್ದಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ತೆರಳುತ್ತಿದ್ದಂತೆಯೇ ಕಡ್ಡಾಯವಾಗಿ ಧರಿಸಬೇಕಿದ್ದ ಮಾಸ್ಕ್ ನ್ನು ಈ ವ್ಯಕ್ತಿ ಕಿತ್ತೆಸೆದು ಸಾರ್ವಜನಿಕವಾಗಿ ದುರ್ವರ್ತನೆ ತೋರಿದ್ದ. ಅಷ್ಟೇ ಅಲ್ಲದೇ ಕೋವಿಡ್-19 ಇದ್ದ ಪರಿಸ್ಥಿತಿಯಲ್ಲಿ ಉದ್ದೇಶಪೂರ್ವಕವಾಗಿ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ಕೆಮ್ಮಿ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp