ಭಾರತ್ ಬಯೋಟೆಕ್ ನ 'ಕೋವ್ಯಾಕ್ಸಿನ್ ಲಸಿಕೆ' ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ: ಬ್ರೆಜಿಲ್

ಮಾರಕ ಕೊರೋನಾ ವೈರಸ್ ಗೆ ನೀಡಲಾಗುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆಯ 'ಕೋವ್ಯಾಕ್ಸಿನ್ ಲಸಿಕೆ' ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಗಂಭೀರ ಆರೋಪ ಮಾಡಿದೆ.

Published: 31st March 2021 11:24 AM  |   Last Updated: 31st March 2021 12:49 PM   |  A+A-


Bharat Biotech's Covaxin vaccine

ಕೋವ್ಯಾಕ್ಸಿನ್

Posted By : Srinivasamurthy VN
Source : Reuters

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ನೀಡಲಾಗುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆಯ 'ಕೋವ್ಯಾಕ್ಸಿನ್ ಲಸಿಕೆ' ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಗಂಭೀರ ಆರೋಪ ಮಾಡಿದೆ.

ಬ್ರೆಜಿಲ್ ನಲ್ಲಿ ಕೋವಿಡ್ ಲಸಿಕೆಗಳ ಕೊರತೆಯಿಂದಾಗಿ ಉಲ್ಬಣವಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ನಿನ್ನೆಯಷ್ಟೇ ಆ ದೇಶದ ವಿದೇಶಾಂಗ ಸಚಿವ ಅರ್ನೆಸ್ಟೊ ಅರೌಜೊ ಅವರು ರಾಜಿನಾಮೆ ನೀಡಿದ್ದರು. ಇದೀಗ ಬ್ರೆಜಿಲ್ ಸರ್ಕಾರ ಇದೇ ಕೋವಿಡ್ ಲಸಿಕೆ ವಿಚಾರವಾಗಿ ಗಂಭೀರ ಆರೋಪ ಮಾಡುತ್ತಿದ್ದು, ಭಾರತ್ ಬಯೋಟೆಕ್‌ ಸಂಸ್ಥೆ ಕೋವ್ಯಾಕ್ಸಿನ್ ಕೋವಿಡ್-19 ಲಸಿಕೆಯು ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ  ಎಂದು ಬ್ರೆಜಿಲ್‌ನ ಆರೋಗ್ಯ ನಿಯಂತ್ರಕ ಅನ್ವಿಸಾ ಹೇಳಿದೆ.

ಈ ಕುರಿತಂತೆ ನಿನ್ನೆ ಅಧಿಕೃತ ಗೆಜೆಟ್‌ನ ಆವೃತ್ತಿಯಲ್ಲಿ ಟಿಪ್ಪಣಿ ಮಾಡಿದ್ದು, ಕಳೆದ ತಿಂಗಳು ಭಾರತೀಯ ಔಷಧಿ ತಯಾರಕರಿಂದ ಕೋವಿಡ್ ಲಸಿಕೆಯ ಎರಡು ಕೋಟಿ ಡೋಸ್‌ಗಳನ್ನು ಖರೀದಿಸಲು ಬ್ರೆಜಿಲ್ ಸರ್ಕಾರ ಸಹಿ ಹಾಕಿತ್ತು. ಅಂತೆಯೇ ಭಾರತ್ ಬಯೋಟೆಕ್ ಸಂಸ್ಥೆ ಕೂಡ ಮಾರ್ಚ್ 8ರಂದು ಬ್ರೆಜಿಲ್‌ನಲ್ಲಿ ಲಸಿಕೆಯ ತುರ್ತು ಬಳಕೆಗಾಗಿ ಅರ್ಜಿ ಸಲ್ಲಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ್ ಮತ್ತು ಅದರ ಬ್ರೆಜಿಲ್ ಪಾಲುದಾರ ಪ್ರೆಸಿಕಾ ಮೆಡಿಕಾಮೆಂಟೋಸ್, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದು, ಎಲ್ಲ ಮಾನದಂಡಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಪ್ರಸ್ತುತಪಡಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸೇರಿದಂತೆ ಐದು ದೇಶಗಳಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp