ಅನ್ಯಾಯದ ಬಂಧನ, ಸೇನಾ ಸಿಬ್ಬಂದಿಯ ಹಿಂಸೆ; ಭಾರತದಲ್ಲಿ ಹಲವು ಮಾನವ ಹಕ್ಕುಗಳ ಸಮಸ್ಯೆಯಿದೆ: ಅಮೆರಿಕ ವರದಿ

ಕಾನೂನುಬಾಹಿರ ಮತ್ತು ಅನಿಯಂತ್ರಿತ ಹತ್ಯೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು, ಭ್ರಷ್ಟಾಚಾರ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ಸಹಿಸಿಕೊಳ್ಳುವುದು ಸೇರಿದಂತೆ ಹಲವು ಮಾನವ ಹಕ್ಕುಗಳ ಸಮಸ್ಯೆಗಳು ಭಾರತದಲ್ಲಿದೆ ಎಂದು ಅಮೆರಿಕ ಸರ್ಕಾರದ ವರದಿ ಹೇಳುತ್ತದೆ.

Published: 31st March 2021 09:23 AM  |   Last Updated: 31st March 2021 12:48 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ವಾಷಿಂಗ್ಟನ್: ಕಾನೂನುಬಾಹಿರ ಮತ್ತು ಅನಿಯಂತ್ರಿತ ಹತ್ಯೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು, ಭ್ರಷ್ಟಾಚಾರ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ಸಹಿಸಿಕೊಳ್ಳುವುದು ಸೇರಿದಂತೆ ಹಲವು ಮಾನವ ಹಕ್ಕುಗಳ ಸಮಸ್ಯೆಗಳು ಭಾರತದಲ್ಲಿದೆ ಎಂದು ಅಮೆರಿಕ ಸರ್ಕಾರದ ವರದಿ ಹೇಳುತ್ತದೆ.

'2020 ಮಾನ ಹಕ್ಕುಗಳ ಪದ್ಧತಿಗಳ ದೇಶದ ವರದಿಗಳು' ರಲ್ಲಿ ಅಮೆರಿಕ ಕಾಂಗ್ರೆಸ್, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ.

ಕೆಲವು ಭದ್ರತೆ ಮತ್ತು ಸಂವಹನ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಸಹಜತೆ ಮರಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವರದಿಯಲ್ಲಿ ಅಮೆರಿಕ ಸರ್ಕಾರ ಹೇಳಿದೆ. ಭಾರತ ಸರ್ಕಾರ ರಾಜಕೀಯ ಕಾರ್ಯಕರ್ತರನ್ನು ಗೃಹ ಬಂಧನದಿಂದ ಮುಕ್ತ ಮಾಡಿದೆ ಎಂದು ಕೂಡ ಹೇಳಿದೆ.

ಕಳೆದ ಜನವರಿಯಲ್ಲಿ ಸರ್ಕಾರ ಭಾಗಶಃ ಇಂಟರ್ನೆಟ್ ಸೌಲಭ್ಯವನ್ನು ಪುನರ್ ಸ್ಥಾಪಿಸಿದ್ದು, ಅತಿ ವೇಗದ 4ಜಿ ಮೊಬೈಲ್ ಸಂಪರ್ಕ ಮಾತ್ರ ಜಮ್ಮು-ಕಾಶ್ಮೀರದ ಬಹುತೇಕ ಭಾಗಗಳಲ್ಲಿ ನಿರ್ಬಂಧ ಮುಂದುವರಿದಿದೆ ಎಂದಿದ್ದಾರೆ.

ಚುನಾವಣಾ ಕ್ಷೇತ್ರಗಳನ್ನು ಪುನರ್ರಚಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿತು ಆದರೆ ಸ್ಥಳೀಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಲಿಲ್ಲ. ಸ್ಥಳೀಯ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗಳು ಡಿಸೆಂಬರ್‌ನಲ್ಲಿ ನಡೆದವು, ಇದರಲ್ಲಿ ಕಾಶ್ಮೀರಿ ವಿರೋಧ ಪಕ್ಷಗಳ ಒಕ್ಕೂಟವು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತು ಎಂದು ವರದಿ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ಪ್ರತ್ಯೇಕತಾವಾದಿ ದಂಗೆಕೋರರು ಮತ್ತು ಭಯೋತ್ಪಾದಕರು ಸಶಸ್ತ್ರ ಪಡೆಗಳ ಸಿಬ್ಬಂದಿ, ಪೊಲೀಸ್, ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರ ಹತ್ಯೆ ಮತ್ತು ಚಿತ್ರಹಿಂಸೆ ಮತ್ತು ಬಾಲ ಸೈನಿಕರ ನೇಮಕಾತಿ ಮತ್ತು ಬಳಕೆ ಸೇರಿದಂತೆ ಹಲವು ಸಮಸ್ಯೆಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ.

ವಿದೇಶಾಂಗ ಇಲಾಖೆ ತನ್ನ ವರದಿಯಲ್ಲಿ ಭಾರತದಲ್ಲಿ 12ಕ್ಕೂ ಹೆಚ್ಚು ಮಹತ್ವದ ಮಾನವ ಹಕ್ಕುಗಳ ಸಮಸ್ಯೆಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಪ್ರಮುಖವಾದದ್ದು ಕಾನೂನುಬಾಹಿರ ಮತ್ತು ಅನಿಯಂತ್ರಿತ ಹತ್ಯೆಗಳು, ಇದರಲ್ಲಿ ಪೊಲೀಸರು ನಡೆಸಿದ ಕಾನೂನು ಬಾಹಿರ ಹತ್ಯೆಗಳು ಸೇರಿವೆ; ಕೆಲವು ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಕ್ರೂರ, ಅಮಾನವೀಯ ಚಿತ್ರಹಿಂಸೆ ಮತ್ತು ಪ್ರಕರಣಗಳು; ಸರ್ಕಾರಿ ಅಧಿಕಾರಿಗಳಿಂದ ಅನಿಯಂತ್ರಿತ ಬಂಧನ ಮತ್ತು ಕಠಿಣ ಮತ್ತು ಮಾರಣಾಂತಿಕ ಜೈಲು ಪರಿಸ್ಥಿತಿಗಳು ಇತ್ಯಾದಿಗಳನ್ನು ಹೇಳಿದೆ.

ಈ ಹಿಂದೆ ಭಾರತ ಇದೇ ರೀತಿಯ ವರದಿಗಳನ್ನು ತಿರಸ್ಕರಿಸಿತ್ತು. 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp