ಭಾರತಕ್ಕೆ ಆಮ್ಲಜನಕ ಪೂರೈಕೆಗಾಗಿ 10 ಮಿಲಿಯನ್ ಡಾಲರ್ ನೆರವು ಘೋಷಿಸಿದ ಉದ್ಯಮಿ ವಿನೋದ್ ಖೋಸ್ಲಾ

ಭಾರತದಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಭಾರತೀಯ- ಅಮೆರಿಕನ್ ಮೂಲದ ಕೋಟ್ಯಾಧಿಪತಿ ಉದ್ಯಮಿ ವಿನೋದ್ ಖೋಸ್ಲಾ ಘೋಷಿಸಿದ್ದಾರೆ.

Published: 03rd May 2021 11:11 AM  |   Last Updated: 03rd May 2021 12:25 PM   |  A+A-


Vinod_Khosla1

ಉದ್ಯಮಿ ವಿನೋದ್ ಖೋಸ್ಲಾ

Posted By : Nagaraja AB
Source : Online Desk

ಹೂಸ್ಟನ್: ಭಾರತದಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆಗಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಭಾರತೀಯ- ಅಮೆರಿಕನ್ ಮೂಲದ ಕೋಟ್ಯಾಧಿಪತಿ ಉದ್ಯಮಿ ವಿನೋದ್ ಖೋಸ್ಲಾ ಘೋಷಿಸಿದ್ದಾರೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ಸನ್ ಮೈಕ್ರೊಸಿಸ್ಟಮ್ ಸಹ ಸಂಸ್ಥಾಪಕರಾಗಿರುವ
ವಿನೋದ್ ಖೋಸ್ಲಾ, ಆಕ್ಸಿಜನ್ ಪೂರೈಸಲು ಆಸ್ಪತ್ರೆಗಳಿಗೆ ಹಣ ನೀಡಲು ಮುಂದಾಗಿದ್ದಾರೆ. 

ಭಾನುವಾರ ಟ್ವೀಟರ್ ನಲ್ಲಿ ಈ ವಿಷಯ ತಿಳಿಸಿರುವ ವಿನೋದ್ ಖೋಸ್ಲಾ, ಹೆಚ್ಚಿನ ವಿಳಂಬವು ಹೆಚ್ಚಿನ ಸಾವುಗಳಿಗೆ ಕಾರಣವಾಗುವುದರಿಂದ ಜೀವಗಳನ್ನು ಉಳಿಸುವ ಅವಶ್ಯಕತೆಯಿದೆ ಎಂದಿದ್ದಾರೆ.

20 ಸಾವಿರ ಆಕ್ಸಿಜನ್ ಸಾಂದ್ರಕಗಳು, 15 ಸಾವಿರ ಆಕ್ಸಿಜನ್ ಸಿಲಿಂಡರ್ ಗಳು, 500 ಐಸಿಯು ಬೆಡ್ ಗಳು ಸೇರಿದಂತೆ  ವಿವಿಧ ವೈದ್ಯಕೀಯ ನೆರವು ಕೋರಿ ಭಾರತದಲ್ಲಿನ ಆಸ್ಪತ್ರೆಗಳಿಂದ ಪ್ರತಿನಿತ್ಯ ಮನವಿ ಬರುತ್ತಿದ್ದು,  ತುರ್ತಾಗಿ ನಾವು ಹೆಚ್ಚು ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಹೇಳಿದಂತೆ ಭಾರತಕ್ಕೆ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಖೋಸ್ಲಾ ಕುಟುಂಬ ನೀಡಲಿದ್ದು, ಇತರರು ಈ ತುರ್ತು ಅಗತ್ಯ ಪೂರೈಸಲು ಮುಂದಾಗುವ ವಿಶ್ವಾಸವಿದೆ  ಎಂದು ಖೋಸ್ಲಾ ಹೇಳಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp