ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ: ಏಳು ಮಂದಿ ಸಾವು

ಬಂದೂಕುಧಾರಿಯೊಬ್ಬ ಬರ್ತ್ ಡೇ ಪಾರ್ಟಿಯಲ್ಲಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು ಗುಂಡೇಟಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ.
ಪೊಲೀಸರು
ಪೊಲೀಸರು

ಕೊಲರಾಡೋ: ಬಂದೂಕುಧಾರಿಯೊಬ್ಬ ಬರ್ತ್ ಡೇ ಪಾರ್ಟಿಯಲ್ಲಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು ಗುಂಡೇಟಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ. 

ಕೊಲೊರಾಡೋದಲ್ಲಿ ಈ ಘಟನೆ ನಡೆದಿದೆ. ಸ್ಪ್ರಿಂಗ್ಸ್ ನ ಪೂರ್ವ ಭಾಗದಲ್ಲಿರುವ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ಗುಂಡಿನ ದಾಳಿ ನಡೆದಿದೆ. 

ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಟುಂಬ, ಮಕ್ಕಳು ಮತ್ತು ಸ್ನೇಹಿತರು ಸೇರಿ ಖುಷಿಯಲ್ಲಿ ಮುಳುಗಿದ್ದರು. ಈ ವೇಳೆ ಪಾರ್ಟಿಗೆ ನುಗ್ಗಿದ್ದ ಬಂದೂಕುದಾರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತನ್ನ ಪ್ರೇಯಸಿ ಭಾಗಿಯಾಗಿದ್ದ ಪಾರ್ಟಿ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ನಂತರ ಆತನು ತನಗೆ ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com