ಅಮೆರಿಕಾದಿಂದ ಭಾರತಕ್ಕೆ ಈವರೆಗೆ 500 ಮಿಲಿಯನ್ ಡಾಲರ್ ಕೋವಿಡ್ ಪರಿಹಾರ ಸಾಮಗ್ರಿ ಪೂರೈಕೆ: ಶ್ವೇತ ಭವನ

ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕಾ ಇಲ್ಲಿಯವರೆಗೂ 500 ಮಿಲಯನ್ ಡಾಲರ್ (3,656 ಕೋಟಿ ರೂ.)ಗೂ ಅಧಿಕ ಮೊತ್ತದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ಶ್ವೇತಭವನ ಹೇಳಿದೆ. 
ಜೋ ಬಿಡನ್
ಜೋ ಬಿಡನ್

ವಾಷಿಂಗ್ಟನ್: ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕಾ ಇಲ್ಲಿಯವರೆಗೂ 500 ಮಿಲಯನ್ ಡಾಲರ್ (3,656 ಕೋಟಿ ರೂ.)ಗೂ ಅಧಿಕ ಮೊತ್ತದ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ಶ್ವೇತಭವನ ಹೇಳಿದೆ. 

ಭಾರತ ಸೇರಿದಂತೆ ಇತರ ದೇಶಗಳೂ ಸಹ ಕೋವಿಡ್ ನಿಂದ ತತ್ತರಿಸಿ ಹೋಗಿವೆ. ಸದ್ಯ ಕೋವಿಡ್ ಎರಡನೇ ಅಲೆಯಿಂದಾಗಿ ಭಾರತೀಯರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ನಮ್ಮ ಗಮನದಲ್ಲಿದೆ. ಹೀಗಾಗಿ ಭಾರತಕ್ಕೆ ಸದ್ಯಕ್ಕೆ 500 ಮಿಲಿಯನ್ ಡಾಲರ್ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಭಾರತಕ್ಕೆ ಅಮೆರಿಕದ ಒಕ್ಕೂಟ ಸರ್ಕಾರವಲ್ಲದೆ ವಿವಿಧ ರಾಜ್ಯಗಳ ಸರ್ಕಾರಗಳೂ ಕೂಡ ಪರಿಹಾರ ಸಾಮಗ್ರಿಗಳನ್ನು ಒದಗಿಸಿವೆ. ಹಲವು ಸಂಘಟನೆಗಳು, ಕಂಪನಿಗಳು ಸಹ ನೆರವು ನೀಡಿವೆ ಎಂದರು. 

ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ರಾಷ್ಟ್ರಗಳಿಗೆ ನೆರವು ನೀಡಲು ಅಧ್ಯಕ್ಷ ಜೋ ಬೈಡನ್ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಏಳು ವಿಮಾನಗಳ ಮೂಲಕ ವಿವಿಧ ವೈದ್ಯಕೀಯ ಪರಿಕರಗಳನ್ನು ಕಳುಹಿಸಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com