ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಕುರಿತು ಭಾರತ್ ಬಯೋಟೆಕ್ ನಿಂದ ಇನ್ನಷ್ಟು ಮಾಹಿತಿ ಬೇಕು: ವಿಶ್ವ ಆರೋಗ್ಯ ಸಂಸ್ಥೆ

ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ಜಿನೇವಾ: ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡುವ ಕುರಿತು ಮತ್ತಷ್ಟು ದಾಖಲೆ ಮತ್ತು ಮಾಹಿತಿ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕಳೆದ ಏಪ್ರಿಲ್ 18 ಭಾರತ್ ಬಯೋಟೆಕ್ ಸಂಸ್ಥೆ ಮೇ 18ರಂದು EOI (Expression of Interest) ವಾಕ್ಸಿನ್ ತುರ್ತು ಬಳಕೆಯ ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿತ್ತು. ಇದೇ ಮೇ 18ರಂದು ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯ ಕುರಿತು ಹೆಚ್ಚುವರಿ ಮಾಹಿತಿ ಕೇಳಿತ್ತು.

ಇದೇ ಮೇ ಯಿಂದ ಜೂನ್ ತಿಂಗಳ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಲಿದ್ದು ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಶೇ.90ರಷ್ಟು ದಾಖಲೆ ಸಲ್ಲಿಕೆ ನೀಡಿದ್ದೇವೆ ಎಂದ ಕೋವ್ಯಾಕ್ಸಿನ್ ಕೋವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆ ಪಟ್ಟಿ(ಇಯುಎಲ್)ಯಲ್ಲಿ ಸ್ಥಾನ ಪಡೆಯುವ ಸಂಬಂಧ ಈಗಾಗಲೇ ಶೇ.90ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಈ ಹಿಂದೆ ಸರ್ಕಾರಕ್ಕೆ ತಿಳಿಸಿತ್ತು. ಉಳಿದ ದಾಖಲೆಗಳನ್ನು ಜೂನ್ ವೇಳೆಗೆ ಸಲ್ಲಿಸುವ ನಿರೀಕ್ಷೆಯಿದೆ.

ಕೋವ್ಯಾಕ್ಸಿನ್‌ ತುರ್ತು ಬಳಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಪಡೆಯುವ ಕುರಿತ ಚರ್ಚೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಿಮಿಟೆಡ್ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಕೋವ್ಯಾಕ್ಸಿನ್‌ ಈಗಾಗಲೇ 11 ದೇಶಗಳಿಂದ ನಿಯಂತ್ರಕ ಅನುಮೋದನೆ ಪಡೆದಿದ್ದು, ಏಳು ರಾಷ್ಟ್ರಗಳ 11 ಕಂಪನಿಗಳು ತಂತ್ರಜ್ಞಾನ ವರ್ಗಾವಣೆ ಮತ್ತು ಕೋವ್ಯಾಕ್ಸಿನ್‌ ಉತ್ಪಾದನೆಗೆ ಆಸಕ್ತಿ ತೋರಿಸಿವೆ.

ಅಮೆರಿಕಾದಲ್ಲಿ ಕೋವ್ಯಾಕ್ಸಿನ್ ಸಣ್ಣ ಪ್ರಮಾಣದ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತದೊಂದಿಗಿನ ಮಾತುಕತೆ ಅಂತಿಮ ಹಂತದಲ್ಲಿದೆ. ಇನ್ನು ಬ್ರೆಜಿಲ್ ಮತ್ತು ಹಂಗೇರಿಯಲ್ಲಿ ಕೋವ್ಯಾಕ್ಸಿನ್‌ ಗೆ ನಿಯಂತ್ರಕ ಅನುಮೋದನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅಂತಿಮ ಹಂತದಲ್ಲಿ ಬಿಬಿಐಎಲ್ ಇದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com