ಆಫ್ಘಾನಿಸ್ತಾನ ಕುರಿತ ಚರ್ಚೆಯಲ್ಲಿ ಭಾರತ ಪ್ರಮುಖ ಭಾಗ ಎಂದು ಅಮೆರಿಕ ಭಾವಿಸುತ್ತದೆ: ವಿದೇಶಾಂಗ ಸಚಿವ ಜೈಶಂಕರ್

ಆಫ್ಘಾನಿಸ್ತಾನದ ಭವಿಷ್ಯದ ಬಗ್ಗೆ ಚರ್ಚೆ ಬಂದಾಗ ಭಾರತ ಸಂವಹನದ ಪ್ರಮುಖ ಭಾಗವಾಗುತ್ತದೆ ಎಂದು ಅಮೆರಿಕ ಗುರುತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಎಸ್ ಜೈಶಂಕರ್
ಎಸ್ ಜೈಶಂಕರ್

ವಾಷಿಂಗ್ಟನ್: ಆಫ್ಘಾನಿಸ್ತಾನದ ಭವಿಷ್ಯದ ಬಗ್ಗೆ ಚರ್ಚೆ ಬಂದಾಗ ಭಾರತ ಸಂವಹನದ ಪ್ರಮುಖ ಭಾಗವಾಗುತ್ತದೆ ಎಂದು ಅಮೆರಿಕ ಗುರುತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಅಧಿಕೃತ ಪ್ರವಾಸದ ಅಂಗವಾಗಿ ಅಮೆರಿಕದಲ್ಲಿರುವ ಎಸ್ ಜೈಶಂಕರ್, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಜೇಕ್ ಸುಲ್ಲಿವಾನ್ ಅವರೊಂದಿಗೆ ನಡೆಸಿದ ಸಭೆಗಳ ವೇಳೆ ಆಫ್ಘಾನಿಸ್ತಾನದಿಂದ ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ವಿಷಯ ಚರ್ಚೆಗೆ ಬಂದಿತು ಎಂದಿದ್ದಾರೆ.

ನಾನು ಅಮೆರಿಕ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಆಫ್ಘಾನಿಸ್ತಾನ ವಿಷಯ ಕೂಡ ಪ್ರಸ್ತಾಪವಾಗಿತ್ತು. ಯಾಕೆಂದರೆ ಅದು ತುಂಬಾ ಮುಖ್ಯವಾದ ವಿಷಯ. ಸಂಭವನೀಯ ಸನ್ನಿವೇಶಗಳು, ಸೇನಾಪಡೆಯನ್ನು ಹಿಂಪಡೆಯುವುದು ಸ್ಪಷ್ಟವಾಗಿ ನಮಗೆ ಮುಖ್ಯವಾದ ಸಂಗತಿಯಾಗಿದೆ, ಇದು ಅಫ್ಘಾನಿಸ್ತಾನಕ್ಕೆ ಮತ್ತು ಅಮೆರಿಕಾಗೆ ಮುಖ್ಯವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ವರ್ಷ ಸೆಪ್ಟೆಂಬರ್ 11ರೊಳಗೆ ಆಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕ ಪಡೆಯನ್ನು ಹಿಂಪಡೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದರು. ಈ ಮೂಲಕ ಎರಡೂ ದೇಶಗಳ ಮಧ್ಯೆ 2 ದಶಕಗಳ ಕಾಲದ ಕದನಕ್ಕೆ ವಿರಾಮ ಹೇಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಅಮೆರಿಕದಲ್ಲಿ ನಿನ್ನೆ ಭಾರತೀಯ ಪತ್ರಕರ್ತರ ಸಮೂಹದ ಜೊತೆ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕ-ಆಫ್ಘಾನಿಸ್ತಾನ ಸಂಘರ್ಷ ವಿಷಯದಲ್ಲಿ ಭಾರತ ಕೂಡ ಖಂಡಿತಾ ಮುಖ್ಯವಾಗುತ್ತದೆ ಎಂದರು.

ಅಫ್ಘಾನಿಸ್ತಾನವನ್ನು ಆರ್ಥಿಕವಾಗಿ ಸ್ಥಿರಗೊಳಿಸಲು ಭಾರತವು 3 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದೆ, 2001 ರಿಂದ ಅಮೆರಿಕ ನೇತೃತ್ವದ ಪಡೆಗಳು ತಾಲಿಬಾನ್ ನ್ನು ಕಾಬೂಲ್‌ನಿಂದ ಹೊರಹಾಕಿದ ನಂತರ ಪುನರ್ನಿರ್ಮಾಣ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com