ದಿನಂಪ್ರತಿ ಸಾವಿರಾರು ಆಫ್ಘನ್ ನಿರಾಶ್ರಿತರು ಇರಾನಿನತ್ತ ವಲಸೆ: ಯುರೋಪ್ ಗೆ ತಲೆನೋವು

ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಾಲಿಬಾನ್ ಆಡಳಿತಕ್ಕೊಳಪಡಲು ಇಷ್ಟವಿಲ್ಲದೆ ಪ್ರತಿದಿನ ಸಾವಿರಾರು ಮಂದಿ ಆಫ್ಘನ್ನರು ನೆರೆಯ ಇರಾನ್ ಗೆ ವಲಸೆ ಹೋಗುತ್ತಿರುವ ಸುದ್ದಿ ಬಹಿರಂಗವಾಗಿದೆ. ಆಫ್ಘನ್ ವಲಸಿಗರಿಗೆ ಮಾನವೀಯ ನೆರವು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾರ್ವೆ ತಂಡ ಬಹಿರಂಗಪಡಿಸಿದ್ದಾರೆ.  

ಇರಾನ್ ದೇಶದೊಳಕ್ಕೆ ಆಫ್ಘನ್ ನಿರಾಶ್ರಿತರು ವಲಸೆ ಪ್ರಮಾನ ಹೆಚ್ಚುತ್ತಲೇ ಹೋದಲ್ಲಿ ಮುಂದೆ ಐರೋಪ್ಯ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಈ ಬಗ್ಗೆ ಅವರು ತಮ್ಮ ಸಂಬಂಧಿಕರಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com