ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ: 71 ಕೇಸ್ ದಾಖಲು, 450 ಜನರ ಬಂಧನ
ಹಿಂದೂಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿವಿಧ ಕಡೆಗಳಲ್ಲಿ 71 ಕೇಸ್ ಗಳು ದಾಖಲಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡುತ್ತಿದ್ದ ಹಿನ್ನೆಲೆಯಲ್ಲಿ 450 ಜನರನ್ನು ಬಂಧಿಸಲಾಗಿದೆ.
Published: 19th October 2021 11:22 AM | Last Updated: 19th October 2021 11:22 AM | A+A A-

ಬಾಂಗ್ಲಾ ಪೊಲೀಸರ ಚಿತ್ರ
ಢಾಕಾ: ಹಿಂದೂಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿವಿಧ ಕಡೆಗಳಲ್ಲಿ 71 ಕೇಸ್ ಗಳು ದಾಖಲಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡುತ್ತಿದ್ದ ಹಿನ್ನೆಲೆಯಲ್ಲಿ 450 ಜನರನ್ನು ಬಂಧಿಸಲಾಗಿದೆ.
ಪೂಜಾ ಸ್ಥಳಗಳು, ದೇವಾಲಯಗಳು, ಹಿಂದೂಗಳ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ಕಳೆದ ಐದು ದಿನಗಳಲ್ಲಿ ನಡೆಸಿದ ದಾಳಿ ಹಾಗೂ ದುರ್ಗಾ ಪೂಜೆ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡುತ್ತಿದ್ದಕ್ಕೆ 450 ಜನರನ್ನು ಬಂಧಿಸಲಾಗಿದೆ ಎಂದು ಢಾಕಾ ಟ್ರಿಬುನ್ ವರದಿ ಮಾಡಿದೆ.
ದೇಶದ ವಿವಿಧೆಡೆಗಳಲ್ಲಿ 71 ಕೇಸ್ ಗಳು ದಾಖಲಾವಿಗೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಎಮ್‌ಡಿ ಕಮರುಜ್ ಮಾನ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಯುತ್ತಿರುವುದರಿಂದ ಬಂಧನಗಳು ಮತ್ತು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.