ಐಎಂಎಫ್ ಮುಖ್ಯಸ್ಥ ಸ್ಥಾನ ತ್ಯಜಿಸಲು ಭಾರತೀಯ ಮೂಲದ ಗೀತಾ ಗೋಪಿನಾಥ್ ನಿರ್ಧಾರ

2018ರಲ್ಲಿ ಅವರು  ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಇಂದಿಗೆ ಐ.ಎಂ.ಎಫ್ ಮುಖ್ಯಸ್ಥ ಹುದ್ದೆಯಲ್ಲಿ ಗೀತಾ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 
ಗೀತಾ ಗೋಪಿನಾಥ್
ಗೀತಾ ಗೋಪಿನಾಥ್

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಮುಖ್ಯಸ್ಥೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ತಮ್ಮ ಸ್ಥಾನ ತ್ಯಜಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. 

ಗೀತಾ ಗೋಪಿನಾಥ್ ಅವರು ಐ.ಎಂ.ಎಫ್ ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಅವರು  ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಇಂದಿಗೆ ಐ.ಎಂ.ಎಫ್ ಮುಖ್ಯಸ್ಥ ಹುದ್ದೆಯಲ್ಲಿ ಗೀತಾ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 

ಗೀತಾ ಅವರ ನಿರ್ಗಮನದ ಸಂದರ್ಭ ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜೀವಾ ಅವರಿ ಗೀತಾ ಸೇವೆಯನ್ನು ಶ್ಲಾಘಿಸಿದ್ದಾರೆ. ಕೊರೊನಾ ಸಂದರ್ಭ ಗೀತಾ ಅವರು ನಿರ್ವಹಿಸಿದ ಜವಾಬ್ದಾರಿ ಅನನ್ಯವಾದುದು ಎಂದು ಅವರು ಗೀತಾ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಗೀತಾ ಗೋಪಿನಾಥ್ ಅವರು ಮುಂದಿನ ದಿನಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಮರಳಲಿದ್ದಾರೆ. ಈ ಹಿಂದೆ ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜಿವಾ ಅವರ ಮೇಲೆ ಆಪಾದನೆಗಳು ಕೇಳಿಬಂದಿದ್ದವು. ಅವರು ದೊಡ್ಡ ದೊಡ್ಡ ಪ್ರಭಾವಿ ದೇಶಗಳ ಬ್ಯಾಂಕುಗಳ ಪರ ತಮಗೆ ಬೇಕಾದಂತೆ ದಾಖಲೆ ತಿದ್ದಲು ಆರ್ಥಿಕ ತಜ್ನರ ಮೇಲೆ ಒತ್ತಡ ಹೇರುತ್ತಿರುವುದಾಗಿ ಆಪಾದನೆ ಮಾಡಲಾಗಿತ್ತು. ಆ ಪ್ರಕರಣಕ್ಕೂ ಗೀತಾ ನಿರ್ಗಮನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.
 
ಇದನ್ನೂ ಓದಿ: 
ಹೊಸ ಕೃಷಿ ಕಾಯ್ದೆಗಳ ಕುರಿತು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಏನೆನ್ನುತ್ತಾರೆ?

Related Article

ಅಬ್ಬಬ್ಬಾ... ಅಗತ್ಯ ವಸ್ತುಗಳು, ತರಕಾರಿ, ಹಣ್ಣು-ಹಂಪಲುಗಳ ಬೆಲೆ ಗಗನಕ್ಕೆ: ಸಾಮಾನ್ಯ ಜನರ ಬದುಕು ತತ್ತರ

ನಿಮ್ಮ ವಿಮೆ ಹಣ ಹಕ್ಕು ತಿರಸ್ಕೃತವಾಗಬಹುದು ಯಾವಾಗ, ಹೇಗೆ ಮತ್ತು ಏಕೆ?: ಬನ್ನಿ ತಿಳಿದುಕೊಳ್ಳೋಣ

ಕಲ್ಲಿದ್ದಲು ಕೊರತೆ: ವಿದ್ಯುತ್ ಅಭಾವ ಎದುರಿಸುತ್ತಿರವ ರಾಜ್ಯಗಳಿಗೆ ದುಪ್ಪಟ್ಟು ಹಣ ತೆತ್ತು ಖರೀದಿಸುವ ಅನಿವಾರ್ಯತೆ

ಸಪ್ಲೈ ಚೈನ್ ನಲ್ಲಿ ಕುಸಿತ; ಜಗತ್ತಿನ ಆರ್ಥಿಕ ಚೇತರಿಕೆ ವೇಗ ಇಳಿತ! (ಹಣಕ್ಲಾಸು)

ಹಣ ದುರ್ಬಳಕೆ: ತಮಿಳುನಾಡು ಮಾಜಿ ಸಚಿವೆ ಇಂದಿರಾ ಕುಮಾರಿಗೆ ಐದು ವರ್ಷ ಜೈಲು

ಅಕ್ರಮ ಹಣ ವರ್ಗಾವಣೆ: ಜಾರಿ ನಿರ್ದೇಶನಾಲಯದಿಂದ ಅಜಂ ಖಾನ್ ವಿಚಾರಣೆ

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಪ್ರಸಕ್ತ ಹಣಕಾಸು ವರ್ಷ 400 ಮಂದಿಗೆ ಉದ್ಯೋಗ: ಖಾಸಗಿ ಬ್ಯಾಂಕುಗಳಲ್ಲಿ 17,000 ಮಂದಿಗೆ ಉದ್ಯೋಗ ನೇಮಕಾತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com