The New Indian Express
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿದೇಶಿ ಪ್ರಧಾನಮಂತ್ರಿಗಳು ತಮಗೆ ನೀಡಿದ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂದು ಪಾಕ್ ವಿರೋಧ ಪಕ್ಷಗಳು ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ತಂಡ ಟೀಂ ಇಂಡಿಯಾ ನೋಡಿ ಕಲಿಯುವುದು ಬಹಳಷ್ಟಿದೆ: ಸಲ್ಮಾನ್ ಭಟ್
10 ಲಕ್ಷ ಡಾಲರ್ ಮೌಲ್ಯದ ವಿದೇಶಿ ವಾಚೊಂದನ್ನು ಇಮ್ರಾನ್ ಖಾನ್ ಮಾರಾಟ ಮಾಡಿರುವುದಾಗಿ ಪ್ರತಿಪಕ್ಷಗಳು ದೂಷಿಸಿವೆ. ಪ್ರಧಾನಮಂತ್ರಿಗಳು ಹಾಗೂ ರಾಜತಾಂತ್ರಿಕರು ಯಾವುದೇ ದೇಶಕ್ಕೆ ಭೇಟಿ ನೀಡುವ ವೇಳೆ ಉಡುಗೊರೆ ನೀಡುವುದು ಮತ್ತು ಉಡುಗೊರೆ ಸ್ವೀಕರಿಸುವುದು ನಡೆಯುತ್ತದೆ.
ಇದನ್ನೂ ಓದಿ: ಎನ್ಎಸ್ಎ ಸಭೆಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ಭಾರತದ ಆಹ್ವಾನ; ಅಫ್ಘಾನಿಸ್ತಾನ ಶಾಂತಿ ಕುರಿತು ಚರ್ಚೆ
ಪಾಕ್ ಸರ್ಕಾರದ ಪ್ರತಿನಿಧಿಗಳಿಗೆ ನೀಡಲ್ಪಡುವ ಉಡುಗೊರೆ ಸರ್ಕಾರದ ಸ್ವತ್ತಾಗಿರುತ್ತದೆ. ಪಾಕ್ ಕಾನೂನಿನ ಪ್ರಕಾರ ತಮಗೆ ನೀಡಲ್ಪಟ್ಟ ಉಡುಗೊರೆಗಳು 10,000 ರೂ.ಗಳಿಗಿಂತ ಕಡಿಮೆ ಬೆಲೆಯದ್ದಾಗಿದ್ದಲ್ಲಿ ಸರ್ಕಾರದ ಪ್ರತಿನಿಧಿಗಳು ಉಡುಗೊರೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು.
ಇದನ್ನೂ ಓದಿ: ತಾಲೀಬಾನ್, ಚೀನಾ- ಪಾಕ್ ಕೃತ್ರಿಮ ಕೂಟದ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಆತಂಕ
ಗಲ್ಫ್ ದೇಶವೊಂದರ ರಾಜ ಇಮ್ರಾನ್ ಖಾನ್ ಗೆ 10 ಲಕ್ಷ ಡಾಲರ್ ಮೌಲ್ಯದ ವಾಚನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಇಮ್ರಾನ್ ಖಾನ್ ಮಾರಾಟ ಮಾಡಿದ್ದಾರೆ. ಈ ವಿಷಯ ಗಲ್ಫ್ ರಾಜನಿಗೂ ಗೊತ್ತಿದೆ ಎಂದು ಪಿಎಂಎಲ್- ಎನ್ ಪಕ್ಷದ ಮುಖ್ಯಸ್ಥೆ ಮರಿಯಂ ನವಾಜ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪರಮಾಣು ತಂತ್ರಜ್ಞಾನವನ್ನು ಅಕ್ರಮವಾಗಿ ಇರಾನ್, ಲಿಬಿಯಾ, ಉತ್ತರ ಕೊರಿಯಾಗೆ ಮಾರಾಟ ಮಾಡಿದ್ದ ಪಾಕ್ ಅಣು ವಿಜ್ಞಾನಿ ಎ.ಕ್ಯು ಖಾನ್ ನಿಧನ