ಸಿರಿಯಾದಲ್ಲಿ ವೈಮಾನಿಕ ದಾಳಿ: ಅಲ್-ಖೈದಾ ಹಿರಿಯ ನಾಯಕನ ಹತ್ಯೆಗೈದ ಅಮೆರಿಕಾ

ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿರುವ ಅಮೆರಿಕಾ ಸೇನಾಪಡೆ ಅಲ್​-ಖೈದಾ ಹಿರಿಯ ನಾಯಕನನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿರುವ ಅಮೆರಿಕಾ ಸೇನಾಪಡೆ ಅಲ್​-ಖೈದಾ ಹಿರಿಯ ನಾಯಕನನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ.

ವಾಯುವ್ಯ ಸಿರಿಯಾದಲ್ಲಿ ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್​ನನ್ನು ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್​ಬೀ ಹೇಳಿದ್ದಾರೆ.

ಎಂಕ್ಯೂ-9 ವಿಮಾನವನ್ನು ಬಳಸಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಅಲ್-ಖೈದಾ ಸಿರಿಯಾವನ್ನು ಪುನರ್​ ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಲು ಮತ್ತು ಬಾಹ್ಯ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಬಳಸುತ್ತದೆ. ಭಯೋತ್ಪಾದಕ ಸಂಘಟನೆಯು ಅಮೆರಿಕಾದ ನಾಗರಿಕರು, ನಮ್ಮ ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಹೇಳಿದರು.

ತಾಯ್ನಾಡಿಗೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸುವುದನ್ನು ಅಮೆರಿಕಾ ಮುಂದುವರಿಸುತ್ತದೆ ಎಂದು ರಿಗ್ಸ್​ಬೀ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com