ತೈಲ ಖರೀದಿಗೆ ಭಾರತದ ಬಳಿ 3,749 ಕೋಟಿ ರೂ. ಸಾಲದ ನೆರವು ಕೇಳಿದ ಶ್ರೀಲಂಕಾ

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಕೊರತೆ ಎದುರಿಸುತ್ತಿದೆ. ಹೀಗಾಗಿ ಭಾರತದ ನೆರವು ಕೋರಿದೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಇಂಧನ ಅಭಾವವನ್ನು ಎದುರಿಸುತ್ತಿರುವ ಶ್ರೀಲಂಕಾ ತೈಲ ಪೂರೈಕೆ ಸ್ಥಗಿತ ತಡೆಗಟ್ಟಲು ಭಾರತದ ಬಳಿ 3,749 ಕೋಟಿ ರೂ. ಸಾಲ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂಡು ಶ್ರೀಲಂಕಾ ತಿಳಿಸಿದೆ. 

ಮುಂದಿನ ವರ್ಷ ಜನವರಿ ತನಕ ಶ್ರೀಲಂಕಾಗೆ ತೈಲ ಪೂರೈಕೆ ನಡೆಯಲಿದೆ. ಜನವರಿ ನಂತರ ತೈಲ ಪೂರೈಕೆ ಎಂದಿನಂತೆ ನಡೆಯಬೇಕೆಂದರೆ ಓಮನ್ ಗೆ ಇಂಧನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ದೇಶ ಇಂಧನ ಶುಲ್ಕ ಭರಿಸಲು ಅಶಕ್ತವಾಗಿದೆ. ಹೀಗಾಗಿ ಭಾರತದ ನೆರವು ಕೋರಿದೆ ಎಂದು  ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಹೇಳಿದ್ದಾರೆ.

ಭಾರತದ ಇಂಡೀಯನ್ ಆಯಿಲ್ ಸಂಸ್ಥೆಯ ಅಧೀನದಲ್ಲಿರುವ ಅಲ್ಲಿನ ಲಂಕಾ ಐಒಸಿ 1 ಲೀ. ಪೆಟ್ರೋಲ್ ಹಗೂ ಡೀಸೆಲ್ ಬೆಲೆಯನ್ನು 5 ರೂ.ಗಳಿಂದ ಏರಿಸಿತ್ತು. ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಸಂಸ್ಥೆ ಮುಂದಿನ ದಿನಗಳಲ್ಲಿ ತೈಲ ದರ ಏರಿಸಲು ಚಿಂತನೆ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com