ಶಾಕಿಂಗ್! 2025 ರವರೆಗೆ ಕಡಿಮೆ ಆಹಾರ ಸೇವಿಸಿ ಎಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ 

ಹದಗೆಡುತ್ತಿರುವ ಆರ್ಥಿಕತೆಯ ಮಧ್ಯೆ ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ಅಲ್ಲದೇ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ. ಹೀಗಾಗಿ ಟೈಫಾಯಿಡ್​​ ಜ್ವರದಂತಹ ರೋಗಗಳ ಹರಡುವಿಕೆಯನ್ನು ತಡೆಯಲು ಅಲ್ಲಿನ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್

ಪ್ಯೊಂಗ್ಯಾಂಗ್: ಹದಗೆಡುತ್ತಿರುವ ಆರ್ಥಿಕತೆಯ ಮಧ್ಯೆ ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ಅಲ್ಲದೇ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ. ಹೀಗಾಗಿ ಟೈಫಾಯಿಡ್​​ ಜ್ವರದಂತಹ ರೋಗಗಳ ಹರಡುವಿಕೆಯನ್ನು ತಡೆಯಲು ಅಲ್ಲಿನ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

ಆಹಾರ ಬಿಕ್ಕಟ್ಟು ಹಿನ್ನೆಲೆ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​​ ಅಲ್ಲಿನ ನಾಗರಿಕರಿಗೆ 2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕರೆ ನೀಡಿದ್ದಾರೆ. ಆಹಾರ ಬಿಕ್ಕಟ್ಟು 2025 ರವರೆಗೆ ಮುಂದುವರೆಯುತ್ತದೆ ಎಂದು ನೆರೆಹೊರೆಯ ವಾಚ್ ಘಟಕದ ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. 

ನೋಟ್​​ಗಳನ್ನು ಮುದ್ರಿಸಲು ಬೇಕಾಗುವ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾತ್ಕಾಲಿಕ ಕರೆನ್ಸಿಯನ್ನು ನೀಡುವಂತೆ ಉತ್ತರ ಕೊರಿಯಾದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com