ಬಡ ದೇಶಗಳಿಗೆ ಹೆಚ್ಚಿನ ಕೋವಿಡ್ ಲಸಿಕೆ ಪೂರೈಕೆ ಕರೆಯೊಂದಿಗೆ ಜಿ-20 ಶೃಂಗಸಭೆ ಆರಂಭ

ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ...
ಜಿ-20 ಶೃಂಗಸಭೆ ಆರಂಭ
ಜಿ-20 ಶೃಂಗಸಭೆ ಆರಂಭ

ರೋಮ್: ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರು ಬಡ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡುವ ಮೂಲಕ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಸಮ್ಮೇಳನ ಜಿ-20 ಶೃಂಗಸಭೆಗೆ ಚಾಲನೆ ನೀಡಿದರು.

ಜಾಗತಿಕವಾಗಿ ಕೋವಿಡ್ ಲಸಿಕೆ ಅಂತರ "ನೈತಿಕವಾಗಿ ಸ್ವೀಕಾರಾರ್ಹವಲ್ಲ" ಎಂದಿರುವ ಡ್ರಾಗಿ ಅವರು, ವಿಶ್ವದ ಬಡ ದೇಶಗಳಲ್ಲಿ ಕೇವಲ ಶೇ. 3 ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಶ್ರೀಮಂತ ರಾಷ್ಟ್ರಗಳಲ್ಲಿ ಶೇ. 70 ಜನ ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಕಡಿಮೆ-ಆದಾಯದ ದೇಶಗಳಿಗೆ ಹೆಚ್ಚಿನ ಲಸಿಕೆ ಪೂರೈಸಲು ಸಾಮೂಹಿಕ ಸಹಾಯಕ್ಕಾಗಿ ಶೃಂಗಸಭೆಯ ಮೂಲಕ ಡ್ರಾಗಿ ಕರೆ ನೀಡಿದರು. ಡ್ರಾಗಿ ಅವರು ರೋಮ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ- 20 ಶೃಂಗಸಭೆಯ ಆತಿಥ್ಯ ವಹಿಸಿದ್ದಾರೆ.

ಇಂದಿನ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಜಾಗತಿಕ ಕನಿಷ್ಠ ಕಾರ್ಪೋರೇಟ್ ತೆರಿಗೆ ದರ, ಕೊವಿಡ್​ 19 ಸಾಂಕ್ರಾಮಿಕದಿಂದ ಆರೋಗ್ಯದಲ್ಲಿ ಚೇತರಿಕೆ, ಜಾಗತಿಕ ಅಭಿವೃದ್ಧಿ ಇತ್ಯಾದಿ ವಿಚಾರಗಳನ್ನು ಇಂದು ನಾಯಕರು ವ್ಯಾಪಕವಾಗಿ ಚರ್ಚಿಸಲಿದ್ದಾರೆ. 

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಜಿ-20 ನಾಯಕರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಜಾಗತಿಕ ಒಳಿತಿಗಾಗಿ ಇರುವ ಅತಿಮುಖ್ಯವಾದ ವೇದಿಕೆಯಾದ ಜಿ-20 ಸಂಘಟನೆಯ ನಾಯಕರು ಇಂದು ರೋಮ್​​ನಲ್ಲಿ ಭೇಟಿಯಾದರು ಎಂದು ಹೇಳಿದೆ. ಈ ಫೋಟೋದಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪಿಎಂ ಬೋರಿಸ್ ಜಾನ್ಸನ್ ಇತರ ಪ್ರಮುಖ ನಾಯಕರು ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com