ಪಂಜ್ ಶೀರ್ ನಲ್ಲಿ ಮುನ್ನಡೆ ಸಾಧಿಸಿದ ಸಂಭ್ರಮಕ್ಕೆ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು: ಇಬ್ಬರು ನಾಗರಿಕರು ಬಲಿ

ಪಂಜ್ ಶೀರ್ ಪ್ರಾಂತ್ಯವಿನ್ನೂ ಪೂರ್ತಿಯಾಗಿ ತಾಲಿಬಾನ್ ವಶವಾಗಿಲ್ಲ. ಅದಿನ್ನೂ ವಿರೋಧಿ ಪಾಳೆಯವಾದ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ವಶದಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ತಾಲಿಬಾನಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವರದಿಯಾಗಿದ್ದು, ದುರ್ಘಟನೆಯಲ್ಲಿ ಇಬ್ಬರು ಆಫ್ಘನ್ನರು ಮೃತ್ಪಟ್ಟಿರುವುದಾಗಿ ಆಸ್ಪತ್ರೆಯೊಂದರ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ 12 ಮಂದಿ ಆಫ್ಘನ್ನರು ಗಾಯಗೊಂಡಿದ್ದಾರೆ. 

ಪಂಜ್ ಶೀರ್ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿದ್ದಕ್ಕೆ ಸಂಭ್ರಮಾಚರಣೆ ಪ್ರಯುಕ್ತ ತಾಲಿಬಾನಿಗಳು ಗಾಳಿಯಲ್ಲಿ ಮನಸೋ ಇಚ್ಛೆ ಗುಂಡು ಹಾರಿಸಿದ್ದಾಗಿ ತಿಳಿದುಬಂದಿದೆ. ಪಂಜ್ ಶೀರ್ ಪ್ರಾಂತ್ಯವಿನ್ನೂ ಪೂರ್ತಿಯಾಗಿ ತಾಲಿಬಾನ್ ವಶವಾಗಿಲ್ಲ. ಅದಿನ್ನೂ ವಿರೋಧಿ ಪಾಳೆಯವಾದ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ವಶದಲ್ಲಿದೆ. 

ಈ ಹಿಂದೆ ಮುಜಾಹಿದೀನ್ ಗುಂಪಿನ ಕಮಾಂಡರ್ ಆಗಿದ್ದಾತನ ಪುತ್ರ ಅಮ್ರು ಸಲೇಹ್ ಎನ್ ಆರ್ ಎಫ್ ಪಡೆಯ ನೇತೃತ್ವ ವಹಿಸಿಕೊಂಡಿದ್ದರು. 

ಗುಂಡಿನ ಹಾರಾಟ ಕುರಿತು ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಘಟನೆಯನ್ನು ಖಂಡಿಸಿದ್ದಾರೆ. ಇನ್ನುಮುಂದೆ ಸಂಭ್ರಮಾಚರಣೆ ಪ್ರಯುಕ್ತ ಗಾಳಿಯಲ್ಲಿ ಗುಂಡು ಹಾರಿಸುವುದಕ್ಕೆ ನಿರ್ಬಂಧ ಹೇರಿರುವುದಾಗಿ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com