ನವೆಂಬರ್ ತಿಂಗಳಲ್ಲಿ ಭಾರತ-ಅಮೆರಿಕ ಮಧ್ಯೆ 2+2 ಮಾತುಕತೆ: ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲ 

ಭಾರತ ಮತ್ತು ಅಮೆರಿಕ ನಡುವೆ 2+2 ಮಾತುಕತೆ ಈ ವರ್ಷ ನವೆಂಬರ್ ಅಂತ್ಯಕ್ಕೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲ ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ 2+2 ಮಾತುಕತೆ ಈ ವರ್ಷ ನವೆಂಬರ್ ಅಂತ್ಯಕ್ಕೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲ ತಿಳಿಸಿದ್ದಾರೆ.

ನವೆಂಬರ್ ನಲ್ಲಿ ನಡೆಯಲಿರುವ 2+2 ಮಾತುಕತೆಯ ಇದಿರು ನೋಡುತ್ತಿದ್ದೇವೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ವಾಷಿಂಗ್ಟನ್ ಡಿ ಸಿಗೆ ಮೂರು ದಿನಗಳ ಭೇಟಿಗೆ ಬಂದಿದ್ದ ಅವರು ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಸಂದರ್ಭದಲ್ಲಿ ಸುದ್ದಿಗಾರರ ತಂಡವೊಂದಕ್ಕೆ ಪ್ರತಿಕ್ರಿಯಿಸಿದರು. ಅಮೆರಿಕದ ಜೊ ಬೈಡನ್ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಆಂಟವಿ ಬ್ಲಿಂಕನ್ ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಕಳೆದ ಬಾರಿಯ 2+2 ಸಭೆ ದೆಹಲಿಯಲ್ಲಿ ನಡೆದಿತ್ತು, ಮುಂದಿನ ಸಭೆ ಅಮೆರಿಕದಲ್ಲಿ ಆಯೋಜಿಸಲಾಗಿದೆ. ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ 2+2 ಅಂತರ-ಅಧಿವೇಶನ ಸಭೆ ನಡೆಸಲು ನಾವು ಈ ಅವಕಾಶವನ್ನು ಬಳಸಿಕೊಂಡಿದ್ದೇವೆ, ಎಂದು ಅವರು ಹೇಳಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಬೈಡನ್ ಆಡಳಿತದ ಮೊದಲ ಭಾರತ-ಯುಎಸ್ 2+2 ಸಭೆಗೆ ಆತಿಥ್ಯ ನೀಡಲಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿ, ಸ್ಥಳೀಯ ಮತ್ತು ಬಹು ಹಂತದ ವಿಷಯಗಳು, ವಿಶ್ವಸಂಸ್ಥೆ ಮತ್ತು ಮುಂಬರುವ ಚತುರ್ಭುಜೀಯ ಶೃಂಗಸಭೆಗಳ ಕುರಿತು ನಾಯಕರು ವಿಸ್ತಾರವಾಗಿ ಚರ್ಚೆ ನಡೆಸಲಿದ್ದಾರೆ.

ಹವಾಮಾನ ಬದಲಾವಣೆಯ ಕುರಿತು ಯುಎಸ್ ವಿಶೇಷ ಪ್ರತಿನಿಧಿ ಜಾನ್ ಕೆರ್ರಿ ಕೂಡ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಹರ್ಷವರ್ಧನ ಶೃಂಗ್ಲ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com