ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಉಲ್ಲಂಘಿಸಿದ 600ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ
ಕರ್ಫ್ಯೂ ನಿಯಮ ಉಲ್ಲಂಘಿಸಿದ 600ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಶ್ರೀಲಂಕಾದಲ್ಲಿ ಭಾನುವಾರ ಬಂಧಿಸಲಾಗಿದೆ. ನಿನ್ನೆ ಶನಿವಾರ ಸಾಯಂಕಾಲ 6 ಗಂಟೆಯಿಂದ ನಾಳೆ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಶ್ರೀಲಂಕಾದ(Sri Lanka) ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಹೇರಲಾಗಿದೆ.
Published: 03rd April 2022 01:30 PM | Last Updated: 03rd April 2022 01:37 PM | A+A A-

ಶ್ರೀಲಂಕಾದಲ್ಲಿ ಕರ್ಫ್ಯೂ ಅಂಗವಾಗಿ ಭದ್ರತಾ ಪಡೆ ನಿಯೋಜನೆ
ಕೊಲಂಬೊ: ಕರ್ಫ್ಯೂ ನಿಯಮ ಉಲ್ಲಂಘಿಸಿದ 600ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಶ್ರೀಲಂಕಾದಲ್ಲಿ ಭಾನುವಾರ ಬಂಧಿಸಲಾಗಿದೆ. ನಿನ್ನೆ ಶನಿವಾರ ಸಾಯಂಕಾಲ 6 ಗಂಟೆಯಿಂದ ನಾಳೆ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಶ್ರೀಲಂಕಾದ(Sri Lanka) ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಹೇರಲಾಗಿದೆ.
ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 6.00 ಗಂಟೆಯವರೆಗೆ ಪಶ್ಚಿಮ ಪ್ರಾಂತ್ಯದಲ್ಲಿ 664 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ. ಭಾನುವಾರದ ಯೋಜಿತ ಪ್ರತಿಭಟನೆಗೆ ಮುಂಚಿತವಾಗಿ, ದೇಶವು ತೀವ್ರ ವಿದ್ಯುತ್ ಬಿಕ್ಕಟ್ಟು ಮತ್ತು ಏರುತ್ತಿರುವ ಹಣದುಬ್ಬರವನ್ನು ಎದುರಿಸುತ್ತಿರುವ ಕಾರಣ ದ್ವೀಪ ರಾಷ್ಟ್ರವು 36 ಗಂಟೆಗಳ ಕರ್ಫ್ಯೂ ಘೋಷಿಸಿತ್ತು.
22 ಮಿಲಿಯನ್ ಜನರಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂಧನ ಆಮದುಗಳಿಗೆ ಪಾವತಿಸಲು ವಿದೇಶಿ ವಿನಿಮಯವನ್ನು ಪಡೆಯಲು ಸರ್ಕಾರವು ಹರಸಾಹಸಪಡುತ್ತಿದೆ. 'ಅರಬ್ ಸ್ಪ್ರಿಂಗ್' ಶೈಲಿಯ ಪ್ರತಿಭಟನೆಯ ಮೊದಲು ದ್ವೀಪದಾದ್ಯಂತ ಕರ್ಫ್ಯೂ ಘೋಷಿಸಲಾಗಿದೆ ಎಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ.
ಅರಬ್ ಸ್ಪ್ರಿಂಗ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ದಂಗೆಗಳು ಮತ್ತು ಸಶಸ್ತ್ರ ದಂಗೆಗಳ ಸರಣಿಯಾಗಿದ್ದು, ಇದು 2010ರ ದಶಕದ ಆರಂಭದಲ್ಲಿ ಅರಬ್ ಪ್ರಪಂಚದಾದ್ಯಂತ ಹರಡಿತು. ದ್ವೀಪ ರಾಷ್ಟ್ರವು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದ ಕುಸಿತದಿಂದಾಗಿ COVID-19 ಸಾಂಕ್ರಾಮಿಕ ರೋಗದಿಂದ ಶ್ರೀಲಂಕಾದ ಆರ್ಥಿಕತೆಯು ಪತನದತ್ತ ಸಾಗುತ್ತಿದೆ.
ಇಂದು ಭಾನುವಾರ ಮಧ್ಯರಾತ್ರಿಯ ನಂತರ ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. Facebook, Twitter, WhatsApp, YouTube, Snapchat, TikTok ಮತ್ತು Instagram ಸೇರಿದಂತೆ ಸುಮಾರು ಎರಡು ಡಜನ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಮೇಲೆ ದೇಶದ ಆರ್ಥಿಕ ಕುಸಿತ ಪರಿಣಾಮ ಬೀರಿವೆ.
ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧದ ಕುರಿತು ಪ್ರತಿಕ್ರಿಯಿಸಿದ ಶ್ರೀಲಂಕಾ ಯುವ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ, ವಿಪಿಎನ್‌ಗಳ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಲಭ್ಯತೆಯಿಂದಾಗಿ ಇಂತಹ ನಿಷೇಧಗಳು ನಿಷ್ಪ್ರಯೋಜಕವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ತಲುಪಿದ ಭಾರತದ 40,000 ಮೆಟ್ರಿಕ್ ಟನ್ ಡೀಸೆಲ್
"ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ. ವಿಪಿಎನ್ ಲಭ್ಯತೆ, ಅಂತಹ ನಿಷೇಧಗಳನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕಗೊಳಿಸುತ್ತದೆ. ಅಧಿಕಾರಿಗಳು ಹೆಚ್ಚು ಪ್ರಗತಿಪರವಾಗಿ ಯೋಚಿಸಲು ಮತ್ತು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ಒತ್ತಾಯಿಸುತ್ತೇನೆ" ಎಂದು ನಮಲ್ ರಾಜಪಕ್ಸೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಪ್ರತಿಭಟನೆ: ಸಾಮಾಜಿಕ ಜಾಲತಾಣ ಬಂದ್!!
ಶ್ರೀಲಂಕಾ ಪ್ರಸ್ತುತ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ, ಇದು ಆಹಾರ, ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆಗೆ ಕಾರಣವಾಗಿದೆ. ಆರ್ಥಿಕ ಸಹಾಯಕ್ಕಾಗಿ ಸ್ನೇಹಪರ ರಾಷ್ಟ್ರಗಳ ಸಹಾಯವನ್ನು ಕೋರಿದೆ. ಶ್ರೀಲಂಕಾವು ಕನಿಷ್ಟ 13 ಗಂಟೆಗಳ ದೈನಂದಿನ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಿದೆ. ಶ್ರೀಲಂಕಾದ ಕರೆನ್ಸಿಯು ಮಾರ್ಚ್ 8 ರಿಂದ US ಡಾಲರ್ ವಿರುದ್ಧ ಸುಮಾರು SLR 90 ರಷ್ಟು ಅಪಮೌಲ್ಯಗೊಂಡಿದೆ.