
ಗ್ರ್ಯಾಮಿ ಕಾರ್ಯಕ್ರಮದಲ್ಲಿ ಜೆಲೆನ್ ಸ್ಕಿ
ಲಾಸ್ ವೆಗಾಸ್: ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಪ್ರತಿಷ್ಟಿತ ಗ್ರ್ಯಾಮಿ ಸಂಗೀತ ಸಮಾರಂಭದಲ್ಲಿ ವರ್ಚುವಲ್ ಭಾಷಣ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ಭಾಷಣದಲ್ಲಿ ಉಕ್ರೇನ್ ಜನರ ನೋವನ್ನು ತಮ್ಮ ಸಂಗೀತದ ಮೂಲಕ ವ್ಯಕ್ತಪಡಿಸುವಂತೆ ಸಂಗೀತಗಾರರಿಗೆ ಜೆಲೆನ್ ಸ್ಕಿ ಕರೆ ನೀಡಿದರು.
ಇದನ್ನೂ ಓದಿ: ಪಾಕಿಸ್ತಾನದ ಪ್ರಸಕ್ತ ರಾಜಕೀಯ ಸನ್ನಿವೇಶದ ಹಿಂದೆ ಸೇನೆಯ ಕೈವಾಡವಿಲ್ಲ: ಪಾಕ್ ಸೇನಾ ವಕ್ತಾರ ಸ್ಪಷ್ಟನೆ
ಉಕ್ರೇನ್ ಸಂಗೀತಗಾರರು ಸೂಟು ಬೂಟು ಧರಿಸಿಲ್ಲ. ರಕ್ಷಾಕವಚವನ್ನು ಧರಿಸಿದ್ದಾರೆ. ನಮ್ಮ ಸಂಗೀತಗಾರರು ಮೈಕ್ ಹಿಡಿದು ವೇದಿಕೆ ಮೇಲೆ ಹಾಡುತ್ತಿಲ್ಲ. ಆಸ್ಪತ್ರೆಗಳಲ್ಲಿ ಶೋಕಗೀತೆ ಹಾಡುತ್ತಿದ್ದಾರೆ ಎಂದು ಜೆಲೆನ್ ಸ್ಕಿ ಭಾವುಕರಾಗಿ ನುಡಿದಿದ್ದಾರೆ.
ಇದನ್ನೂ ಓದಿ: ರಷ್ಯಾ ದಾಳಿ ಮುಂದುವರಿಕೆ: ಉಕ್ರೇನ್ ಜೊತೆಗಿನ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ- ಕ್ರೆಮ್ಲಿನ್
ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿ ಮುಂದುವರಿದಿದ್ದು ಪಟ್ಟಣಗಳು ಸ್ಮಶಾನವಾಗಿ ಮಾರ್ಪಾಡಾಗುತ್ತಿದೆ. ರಸ್ತೆಗಳಲ್ಲಿ ಸೈನಿಕರು, ನಾಗರಿಕರ ಶವಗಳು ಕಂಡುಬಂದಿವೆ.
ಇದನ್ನೂ ಓದಿ: 17 ಸಾವಿರ ಸೈನಿಕರು, 123 ಯುದ್ಧ ವಿಮಾನ, 127 ಚಾಪರ್... ಉಕ್ರೇನ್ ಮೇಲೆ ಯುದ್ಧ ಸಾರಿ ರಷ್ಯಾ ಕಳೆದುಕೊಂಡಿದ್ದಿಷ್ಟು ನೋಡಿ!